ಮೇ 2 ರಿಂದ ವರ್ಣಕುಟೀರದಲ್ಲಿ ಮಕ್ಕಳಿಗೆ ಸ್ಯಾಂಡ್ ಆರ್ಟ್ ತರಬೇತಿ

0

ಪುತ್ತೂರು: ಕಳೆದ 24 ವರ್ಷಗಳಿಂದಲೂ ಮಕ್ಕಳಿಗೆ ನಾನಾ ರೀತಿಯ ಕಲೆಗಳನ್ನು ಕಲಿಸುತ್ತಿರುವ ಕಲ್ಲಾರೆಯಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ 2 ವರ್ಷದ ಹಿಂದೆ ಆರಂಭಗೊಂಡ ಸ್ಯಾಂಡ್ ಆರ್ಟ್ ಕಲೆಯು ಇದೀಗ ಹೊಸ ವಿನ್ಯಾಸದೊಂದಿಗೆ ಮಕ್ಕಳಿಗೆ ವೇದಿಕೆಯಾಗುತ್ತಿದೆ.


ಕಳೆದ ಹಲವು ವರ್ಷಗಳಿಂದ ಚಿತ್ರಕಲೆ ಆಗಲಿ, ಹಿಂದೂಸ್ಥಾನಿ ಸಂಗೀತ, ಕೀಬೋರ್ಡ್, ತ್ರೆಡ್ ಆರ್ಟ್, ಗ್ಲಿಟರ್ ಆರ್ಟ್, ಮ್ಯಾರಲ್ ಆರ್ಟ್, ಸುಗಮ ಸಂಗೀತ, ರಂಗಶಿಕ್ಷಣ, ಕರೋಕೆಯೊಂದಿಗೆ ಹಾಡಿನ ಅಭ್ಯಾಸ ಹಾಗು ಇನ್ನಿತರ ಹೊಸ ಶೈಲಿಯ ಕಲೆಗಳನ್ನು ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿರುವ ಸಂಸ್ಥೆ ಇದೀಗ ಸ್ಯಾಂಡ್ ಆರ್ಟ್ ಅನ್ನು ಮೇ 2 ರಿಂದ 8 ತನಕ ಹೊಸ ವಿನ್ಯಾಸದೊಂದಿಗೆ ಗ್ಲೋ ಸ್ಯಾಂಡ್ ಆರ್ಟ್ ಮತ್ತು ರೇಖಾ ಚಿತ್ರಗಳ ಕಾರ್ಯಗಾರನವನ್ನು ಹಮ್ಮಿಕೊಂಡಿದೆ. 1ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿಗಾಗಿ ಮೊಬೈಲ್ ಸಂಖ್ಯೆ 9741502869, 7349349839 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here