ಮರಾಟಿ ಯುವ ವೇದಿಕೆಯಿಂದ ಮರಾಟಿ ಯುವ ಟ್ರೋಫಿ ಕ್ರಿಕೆಟ್ ಪಂದ್ಯಾಟ

0

ಮಹಮ್ಮಾಯಿ ಸಾಜ ಬಿ ತಂಡ ವಿನ್ನರ್, ಶಿವಾಜಿ ಫ್ರೆಂಡ್ಸ್ ಇರ್ದೆ ತಂಡ ರನ್ನರ್

ಪುತ್ತೂರು:ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಆಶ್ರಯದಲ್ಲಿ ಮರಾಟಿ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ಸ್ವಜಾತಿ ಬಾಂಧವರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ‘ಮರಾಟಿ ಯುವ ಟ್ರೋಫಿ-2025’ ಎ.27ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.


ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಸಮಾಜದಲ್ಲಿ ಸಂಘಟನೆಗೆ ಕ್ರೀಡಾಕೂಟಗಳು ಸಹಕಾರಿ. ಸಮಾಜದ ಕಾರ್ಯಕ್ರಗಳಿಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಿಕುಮೇರು, ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶೀನ ನಾಯ್ಕ ಗಣೇಶನಗರ, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನಪ್ಪ ನಾಯ್ಕ ನೆಲ್ಯಾಡಿ, ಕೋಶಾಧಿಕಾರಿ ಮೋಹನ ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಮರಾಟಿ ಯುವ ವೇದಿಕೆ ಅಧ್ಯಕ್ಷ ವಸಂತ ಆರ್ಯಾಪು, ಕಾರ್ಯದರ್ಶಿ ವಿಖ್ಯಾತ್ ಬಳ್ಳಮಜಲು, ಕೋಶಾಧಿಕಾರಿ ಜಗದೀಶ್ ಎಲಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಸಕ ಅಶೋಕ್ ರೈ ಭೇಟಿ:
ಪಂದ್ಯಾಟದಲ್ಲಿ ಮಧ್ಯಾಹ್ನ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಮಾಜದ ಸಂಘಟನೆಯಲ್ಲಿ ಮರಾಟಿ ಸಮಾಜ ಸೇವಾ ಸಂಘ ಹಾಗೂ ಯುವ ವೇದಿಕೆಯ ಕಾರ್ಯಕ್ರಮಗಳು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


20 ತಂಡಗಳು ಭಾಗಿ:
ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮರಾಟಿ ಸಮಾಜ ಬಾಂಧವರ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಮಹಮ್ಮಾಯಿ ಸಾಜ ಬಿ ತಂಡ ವಿನ್ನರ್ ಹಾಗೂ ಶಿವಾಜಿ ಫ್ರೆಂಡ್ಸ್ ಇರ್ದೆ ತಂಡವು ರನ್ನರ್ ಆಗಿ ಹೊರಹೊಮ್ಮಿತು. ವಿನ್ನರ್ ಆದ ತಂಡಕ್ಕೆ ರೂ.15,555, ರನ್ನರ್ ತಂಡಕ್ಕೆ ರೂ.7,777 ಹಾಗೂ ಟ್ರೋಫಿ ನೀಡಲಾಯಿತು. ಸಂದೀಪ್ ಬೆಸ್ಟ್ ಬೌಲರ್, ಚಿದಾನಂದ ಬೆಸ್ಟ್‌ಬ್ಯಾಟ್ಸ್‌ಮೆನ್, ಅರುಣ್ ಬಪ್ಪಳಿಗೆ ಮ್ಯಾನ್ ಅಪ್ ದಿ ಮ್ಯಾಚ್, ರಕ್ಷಿತ್ ಮ್ಯಾನ್ ಆಪ್ ದಿ ಸೀರಿಸ್ ಹಾಗೂ ಮರಾಟಿ ಯುವ ವೇದಿಕೆ ಕೊಂಬೆಟ್ಟು ಶಿಸ್ತಿನ ತಂಡ ಪ್ರಶಸ್ತಿ ನೀಡಲಾಯಿತು. ಪುರುಷೋತ್ತಮ ವೀಕ್ಷಕ ವಿವರಣೆ ನೀಡಿದರು. ಹರ್ಷದ್ ಕುಂಬ್ರ, ಭವಿತ್ ಕುಂಬ್ರ ಹಾಗೂ ಫಾರೂಕ್ ಕುಂಬ್ರ ತೀರ್ಪುಗಾರರಾಗಿ ಸಹಕರಿಸಿದರು.


ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಯುವಕರ ನೆಚ್ಚಿನ ಕ್ರೀಡೆಯಾಗಿರುವ ಕ್ರಿಕೆಟ್ ಮೂಲಕ ಸಮಾಜದ ಎಲ್ಲಾ ಬಂದುಗಳು ಒಟ್ಟು ಸೇರುವ ಕಾರ್ಯಕ್ರಮವಾಗಿದೆ. ಇದು ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಂಘಟನೆಗೂ ಸಹಕಾರಿಯಾಗಲಿ. ಹಿಂದೂ ಸಮಾಜದ ಅವಿಭಾಜ್ಯ ಅಂಗ ಮರಾಟಿ ಸಮಾಜವು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಿ ಎಂದರು.


ಮರಾಟಿ ಸಂಘದ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಮಂಜುನಾಥ ಎನ್.ಎಸ್ ಮಾತನಾಡಿ, ಮರಾಟಿ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆದಿದೆ. ಯುವ ವೇದಿಕೆಯು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಯುವ ವೇದಿಕೆ ಸಮಾಜದಲ್ಲಿ ಸಂಘಟನೆಗೆ ಉತ್ತಮ ದಾರಿ ನೀಡುತ್ತದೆ ಎಂದರು. ಮಳೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ.


ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಮಾತನಾಡಿ, ಯುವ ವೇದಿಕೆ ಅಧ್ಯಕ್ಷ ವಸಂತ ಆರ್ಯಾಪು ನೇತೃತ್ವದಲ್ಲಿ ಪಂದ್ಯಾಟವು ಉತ್ತಮ ರೀತಿಯಲ್ಲಿ ಮೂಡಿಬಂದಿದೆ. ಎಲ್ಲಾ ತಂಡಗಳು ಕ್ರೀಡಾ ಸ್ಪೂರ್ತಿ ಮೆರೆದಿದೆ. ಯುವಕರಲ್ಲಿ ನಾಯಕತ್ವ, ಸಂವಹನ ಹಾಗೂ ಸಮುದಾಯದಲ್ಲಿ ಸಂಪರ್ಕ ಬೆಳೆಯಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮರಾಟಿ ಯುವ ವೇದಿಕೆಯ ಅಧ್ಯಕ್ಷ ವಸಂತ ಆರ್ಯಾಪು ಮಾತನಾಡಿ, ಮಾತೃ ಸಂಘದ ಮಾರ್ಗದರ್ಶನದಲ್ಲಿ ಕ್ರಿಕೆಟ್ ಪಂದ್ಯಾಟವು ಅದ್ದೂರಿಯಾಗಿ ನಡೆದಿದೆ. ಇದಕ್ಕೆ ಸಹಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು, ಬೂಡಿಯಾರ್ ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಧನುಷ್ ಹೊಸಮನೆ, ಬಿಜೆಪಿ ಯುವಮೋರ್ಛಾದ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ, ಕ್ರೀಡಾ ಸಮಿತಿ ಸಂಚಾಲಕ ಈಶ್ವರ ಮಿತ್ತಡ್ಕ, ಅಧ್ಯಕ್ಷ ರವೀಶ್ ತಾರಿಗುಡ್ಡೆ, ಉಪಾಧ್ಯಕ್ಷ ಅಶೋಕ್ ನಾಯ್ಕ ಸೊರಕೆ, ಗೌರವ ಸಲಹೆಗಾರರಾದ ರಾಮಚಂದ್ರ ನಾಯ್ಕ, ಅಶೋಕ್ ಬಲ್ನಾಡು, ಶೀನಪ್ಪ ನಾಯ್ಕ ಕಾರ್ಯಕಾರಿ ಸಮಿತಿ ಸದಸ್ಯರಾದ ಕರುಣಾಕರ ಪಾಂಗಳಾಯಿ, ಗಂಗಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶಸ್ಚಿನಿ, ಪೂರ್ಣಿಮಾ ಲೋಕೇಶ್, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here