ಪುತ್ತೂರು: ತುಳುನಾಡಿನ ಪುರಾತನ ದೈವಸ್ಥಾನಗಳಲ್ಲಿ ಒಂದಾಗಿರುವ ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳಲ್ಲಿರುವ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮೇ.1ರಂದು ನಡೆಯಲಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಶಿರಾಡಿ ರಾಜನ್ ದೈವವು ನರಿಮೊಗರು ಮತ್ತು ಮುಂಡೂರು ಗ್ರಾಮಕ್ಕೆ ಸಂಬಂಧಿಸಿದ ಮೂಲ ಪಟ್ಟ ದೈವವಾಗಿ ಕಾರಣಿಕ ಮೆರೆದು ಸಕಲ ಗ್ರಾಮಸ್ಧರನ್ನು ಸಲಹುತ್ತಾ ನೆಮ್ಮದಿಯ ಜೀವನ ಕರುಣಿಸಿತ್ತು. ಹಲವು ವರ್ಷಗಳಿಂದ ಯಾವುದೇ ಸೇವೆಗಳು, ನೇಮ ನಡಾವಳಿಗಳು ನಡೆಯದೆ ಅಜೀರ್ಣಾವಸ್ಧೆಯಲ್ಲಿದ್ದ ದೈವಸಾನಿಧ್ಯವು ಕಳೆದ ವರ್ಷ ಜೀರ್ಣೋದ್ಧಾರಗೊಂಡು, ಬ್ರಹ್ಮಕಲಶಗಳು ನೆರವೇರಿತ್ತು. ಈ ಬಾರಿ ಶ್ರೀ ಶಿರಾಡಿ ದೈವದ ಪ್ರಥಮ ವಾರ್ಷಿಕ ನೇಮೋತ್ಸವವು ನಡೆಯುತ್ತಿದೆ.
ನೇಮೋತ್ಸವದ ಅಂಗವಾಗಿ ಎ.30ರಂದು ಸಂಜೆ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ರಾತ್ರಿ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದೆ. ಮೇ.1ರಂದು ಮುಂಜಾನೆ 4 ಗಂಟೆಯಿಂದ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಮಾರಿಕಳ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.