ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವು ಎ.28 ರಂದು ನಡೆಯಿತು. ಸವಣೂರಿನ ಪುಷ್ಪಪುರ ಬಸದಿಯಿಂದ ಕ್ರೀಡಾಜ್ಯೋತಿಯ ಮುಖಾಂತರ ದೀಪವನ್ನು ಬೆಳಗಿಸುವುದರೊಂದಿಗೆ ಕ್ರೀಡೋತ್ಸವಕ್ಕೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿ ಮಾತಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ವ್ಯಕ್ತಿತ್ವದ ಬೆಳವಣಿಗೆಗೆ ಕಲಿಕೆಯೊಂದಿಗೆ ಕ್ರೀಡೆಯು ಅಗತ್ಯ ಎಂದರು.


ಕಾರ್ಯಕ್ರಮದ ಅತಿಥಿ, ನಿವೃತ್ತ ಇಂಡಿಯನ್ ಆರ್ಮಿ ಆಫೀಸರ್ ಸುಂದರ ನಡುಬೈಲು ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಶುಭಾಶಯ ಕೋರಿದರು. ಕ್ರೀಡಾ ಕಾರ್ಯದರ್ಶಿ ಧನುಶ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿಯವರು ವಹಿಸಿದ್ದರು.


ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್‌ರೈ ಯವರು ಸ್ವಾಗತಿಸಿ, ದೈಹಿಕ ನಿರ್ದೇಶಕ ಭರತ್ ಎಮ್.ಎಲ್ ವಂದಿಸಿದರು. ಉಪಪ್ರಾಂಶುಪಾಲ ಶೇಷಗಿರಿ ಎಂ ವಿದ್ಯಾರ್ಥಿ ಕ್ರೀಡಾ ಉಪಕಾರ್ಯದರ್ಶಿಯಾದ ಶಿಲ್ಪಾ ಉಪಸ್ಥಿತರಿದ್ದರು. ಕೌಸಲ್ಯಾ ಹಾಗೂ ಪ್ರೀತಿ ಕಾರ್‍ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here