
ಪುತ್ತೂರು: ಅಕ್ಷಯ ತೃತೀಯಾ ದಿನದಂದು ಚಿನ್ನ ಖರೀದಿಗೆ ಶುಭ ದಿನ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಏ.30ರಂದು ಪುತ್ತೂರಿನ ಕೋರ್ಟು ರಸ್ತೆಯಲ್ಲಿರುವ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರು ಚಿನ್ನ ಖರೀದಿಗೆ ಮುಂದಾಗಿದ್ದರು. ಚಿನ್ನದ ಗುಣಮಟ್ಟ ಮತ್ತು ಅದೃಷ್ಟಶಾಲಿ ಎಂಬ ಟ್ರೇಡ್ ಮಾರ್ಕ್ಗೆ ಒಳಪಟ್ಟಿರುವ ಪುತ್ತೂರಿನ ವಿಜಿತ್ ಜ್ಯುವೆಲ್ಲರ್ಸ್ ಗ್ರಾಹಕರ ಮನೆ ಮಾತಾಗಿದೆ. ಹೀಗಾಗಿ ಇಲ್ಲಿ ಪ್ರತಿದಿನವೂ ಗ್ರಾಹಕರು ತುಂಬಿರುವ ದೃಶ್ಯ ಕಂಡುಬರುತ್ತದೆ.
ಅಕ್ಷಯ ತೃತೀಯಾದ ಶುಭದಿನದಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿರುವುದರಿಂದ ಮಳಿಗೆ ಕಿಕ್ಕಿರಿದು ತುಂಬಿದ್ದ ದೃಶ್ಯ ಕಂಡು ಬಂತು. ಚಿನ್ನದ ಬೆಲೆ ಗಗನಕ್ಕೆ ಏರಿರುವ ಹಿನ್ನೆಲೆಯಲ್ಲಿ ಚಿನ್ನ ಖರೀದಿಯ ಹುರುಪು ತುಸು ಇಳಿದಿರುವುದು ಕಂಡು ಬಂದರೂ, ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ ಅದರ ಪರಿಣಾಮ ಕಂಡುಬರಲಿಲ್ಲ. ಮಧ್ಯಾಹ್ನದ ವೇಳೆಗೆ ಮಳಿಗೆ ತುಂಬಿದ್ದ ದೃಶ್ಯ ಕಂಡು ಬಂತು.
ಮಳಿಗೆಯ ಮ್ಹಾಲಕ ಎ. ಅಚ್ಚುತ ಆಚಾರ್ಯ, ವಿಜಿತ್ ಆಚಾರ್ಯ ಮತ್ತು ಮನೆಯವರು ಹಾಗೂ ಸಿಬ್ಬಂದಿಗಳು ಗ್ರಾಹಕರನ್ನು ಬರಮಾಡಿಕೊಂಡರು.