ಪುತ್ತೂರು : ಕೆಯ್ಯೂರು,ಕೊಂಬೆಟ್ಟು, ಸವಣೂರು, ಕೇಪು, ಬೆಳ್ಳಾರೆ ಶಾಲೆಯಲ್ಲಿ ಶಿಕ್ಷಕರಾಗಿ ಆ ಬಳಿಕ ಮುಖ್ಯ ಗುರುಗಳಾಗಿ ಸುಮಾರು 35 ವರ್ಷಗಳ ಸೇವೆ ಸಲ್ಲಿಸಿದ್ದ ಕೊಳ್ತಿಗೆ ಕೆಳಗಿನ ಮನೆ ಆನಂದ ರೈ(83 ವರ್ಷ) ಏ.30ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಪ್ರತಿಷ್ಠಿತ ಕೊಳ್ತಿಗೆ ಕೆಳಗಿನ ತರವಾಡು ಮನೆ ಕುಟುಂಬದ ಯಜಮಾನರಾಗಿದ್ದ ಇವರು ಪತ್ನಿ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳ ಸಹಿತ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ. ಇವರ ಅಂತಿಮ ವಿಧಿ ವಿಧಾನಗಳು ಅವರ ಸ್ವಗೃಹ ಕಬರಮುಗೇರು ಇಲ್ಲಿ ಏ.30 ರ ಸಂಜೆ ನಡೆಯಲಿದೆಯೆಂದು ಕುಟುಂಬ ಮೂಲ ತಿಳಿಸಿದೆ.