ಪುತ್ತೂರು: ಬಿದ್ದು ಸಿಕ್ಕಿದ ಬ್ಯಾಗನ್ನು ಅದರ ವಾರಿಸುದಾರರಿಗೆ ಹಿಂದಿರುಗಿಸುವ ಮೂಲಕ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ತಿಂಗಳಾಡಿಯಿಂದ ಪುತ್ತೂರಿಗೆ ಬೈಕ್ನಲ್ಲಿ ಹೋಗುತ್ತಿದ್ದ ಚಂದ್ರಶೇಖರ ಗೌಡ ಎಂಬವರ ಬ್ಯಾಗ್ ಕಳೆದುಹೋಗಿತ್ತು. ಕಳೆದ ಹೋದ ಬ್ಯಾಗ್ ಮುಂಡೂರಿನಲ್ಲಿ ಪ್ರವೀಣ್ ಆಚಾರ್ಯರಿಗೆ ಸಿಕ್ಕಿದ್ದು ಅದರಲ್ಲಿ ದಾಖಲೆ ಪತ್ರಗಳು, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಚೆಕ್ ಕಂಡು ಬಂದಿತ್ತು. ದಾಖಲೆಯೊಂದರಲ್ಲಿ ಇದ್ದ ಮೊಬೈಲ್ ನಂಬರ್ ಸಂಪರ್ಕಿಸಿದ ಪ್ರವೀಣ್ ಆಚಾರ್ಯ ಅವರು ಬ್ಯಾಗ್ ಸಿಕ್ಕಿದ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಬಳಿಕ ಚಂದ್ರಶೇಖರ ಗೌಡ ಅವರು ಪ್ರವೀಣ್ ಆಚಾರ್ಯ ಅವರನ್ನು ಸಂಪರ್ಕಿಸಿ ಬ್ಯಾಗ್ನ್ನು ಪಡೆದುಕೊಂಡು ಕೃತಜ್ಞಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಂಡೂರು ವಲಯ ಕಾಂಗ್ರೆಸ್ ಕಾರ್ಯದರ್ಶಿ ಅಶ್ರಫ್ ಮುಲಾರ್, ಮೂಸಾ ಕೊಂಬಳ್ಳಿ, ಮಯಾಝ್ ಮುಲಾರ್, ಅಜೀಂ ಮುಲಾರ್ ಉಪಸ್ಥಿತರಿದ್ದರು.