ನಿಡ್ಪಳ್ಳಿ: ಶ್ರೀ ಧೂಮಾವತಿ, ರಕ್ತೇಶ್ವರಿ, ನಾಗ ಸಾನಿಧ್ಯ ಕಂಬಳತ್ತಡ್ಡ ಇದರ ಪ್ರತಿಷ್ಠಾ ವಾರ್ಷಿಕ ತಂಬಿಲ ಸೇವಾ ಕಾರ್ಯಕ್ರಮ ಮೇ.1 ರಂದು ನಡೆಯಿತು.
ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕರಾದ ನವೀನ್ ಹೆಬ್ಬಾರ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಹಾಯಕ ರಾಜಾರಾಮ ಭಟ್ ನಾಕುಡೇಲು, ನಾಗೇಶ ಗೌಡ ಪುಳಿತ್ತಡಿ ಸೇರಿದಂತೆ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು.