ಪುತ್ತೂರು: 2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಸತತ ಮೂರನೇ ಬಾರಿಗೆ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಒಟ್ಟು 21 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 12 ಮಂದಿ ಡಿಸ್ಟಿಂಕ್ಷನ್, 9 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಿಷಿ ಭಾರದ್ವಾಜ್ ಮತ್ತು ಯಶ್ವಿನ್ 613 ಅಚಿಂತ್ಯ 612 ಹಾಗೂ ಅನಘ 605 ಅಂಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಎಸ್ಎಸ್ಎಲ್ಸಿಯಲ್ಲಿ ನರಿಮೊಗರು ಸರಸ್ವತಿ ವಿದ್ಯಾಮಂದಿರ ಹ್ಯಾಟ್ರಿಕ್ ಸಾಧನೆ – ಸತತ ಮೂರನೇ ಬಾರಿಗೆ ಶೇ.100 ಫಲಿತಾಂಶ