ಪುತ್ತೂರು: ಆರು ಜಿಲ್ಲೆಗಳ ಸಂಯುಕ್ತ ವೇದಿಕೆಯಾಗಿರುವ ಶ್ರೀಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಆಲಂಕಾರು ಹಾಗೂ ಜೀರ್ಣೋದ್ಧಾರ ಸಮಿತಿಯಿಂದ ಆದಿ ನಾಗಬ್ರಹ್ಮ ಮೊಗೇರ್ಕಳ ಮೂಲಸ್ಥಾನವಾಗಿರುವ ನಿಡ್ಪಳ್ಳಿ ಗ್ರಾಮದ ಬ್ರಹ್ಮರಗುಂಡದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಕೆಂಪು ಕೇಪುಲಾಜೆ ಬೆಮ್ಮೆರ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನಗಳಿಗೆ ಶಿಲಾನ್ಯಾಸ ಕಾರ್ಯಕ್ರಮಗಳು ಮೇ.1ರಂದು ನೆರವೇರಿತು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಸ್ವಾಮಿಜಿಯವರು ಹಾಗೂ ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಸಮಾಜದ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿತು.
ಶ್ರದ್ಧಾ ಕೇಂದ್ರಗಳು, ಆರಾಧನ ಕೇಂದ್ರಗಳು ಸಾಮರಸ್ಯದ ಸಂಕೇತವಾಗಿ ಪರಿವರ್ತನೆಗೊಳ್ಳಬೇಕು-ಎಡನೀರು ಶ್ರೀ:
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿ ಮಾತನಾಡಿ, ತುಳುನಾಡಿ ಧಾರ್ಮಿಕ ಇತಿಹಾಸದಲ್ಲಿ ಮೊಗೇರ ಸಮುದಾಯದ ಕೊಡುಗೆ ಅಪಾರ. ಮೊಗೇರ ಸಮುದಾಯದಿಂದ ಸ್ಥಾಪಿಸಲ್ಪಟ್ಟ ಆರಾಧನ ಕೇಂದ್ರಗಳು ಇತಿಹಾಸದ ಪುಟಗಳಿಂದ ತಿಳಿದುಬರುತ್ತಿದೆ. ಮಧೂರಿನ ಮದನಂತೇಶ್ವರ ದೇವರು ಮೊಗೇರ ಸಮುದಾಯದ ತಾಯಿಗೆ ದೊರೆತು ಭೌತಿಕವಾಗಿ ಪೂಜಿಸ್ಪಡುತ್ತಿದೆ. ಹಿಂದು ಧಾರ್ಮಿಕ, ಶ್ರದ್ಧಾ ಕೇಂದ್ರಗಳು, ಆರಾಧನ ಕೇಂದ್ರಗಳು ಸಾಮರಸ್ಯದ ಸಂಕೇತವಾಗಿ ಪರಿವರ್ತನೆಗೊಳ್ಳಬೇಕು. ಅಲ್ಲಿನ ಆಚರಣೆಗಳು ಅದಕ್ಕೆ ಪೂರಕವಾಗಿ ನಡೆಯಬೇಕು. ಹಿಂದು ಸಮಾಜದ ಪ್ರತಿಯೊಬ್ಬರೂ ಜಾತಿ, ಅಂತರದ ಬೇಧವಿಲ್ಲದೆ ಭಾಗಹಿಸಿದಾಗ ಧರ್ಮಕ್ಕೆ ಯಾವುದೇ ರೀತಿಯಲ್ಲಿಯೂ ಹಿನ್ನಡೆಯಾಗದೇ ಭದ್ರವಾಗಲಿದೆ. ಯಾವುದೋ ಕಾರಣಕ್ಕೆ ಜಾತಿಗಳ ಮಧ್ಯೆ ಧ್ವೇಷದಲ್ಲಿ ಧರ್ಮಕ್ಕೆ ತೊಂದರೆ ಆಗಬಾರದು. ಆ ರೀತಿಯ ಘಟನೆಗಳ ನಡೆದಾಗ ಹಿಂದ ಧರ್ಮವನ್ನು ಅಸ್ತಿರಗೊಳಿಸುವ ಹುನ್ನಾರ ನಡೆಯಬಹುದು. ಹೀಗಾಗಿ ಸಮಾಜದಲ್ಲಿ ಒಗ್ಗಟ್ಟು ಇನ್ನಷ್ಟು ಬಲೀಷ್ಠವಾಗಬೇಕು. ಆರಾಧನೆ ಕೇಂದ್ರಗಳು ನಿರ್ಮಾಣವಾದಾಗ ಅದರೊಂದಿಗೆ ಬರೆತು ಒಟ್ಟಿನಿಂದ ಪಾಳ್ಗೊಲ್ಲಬೇಕು. ಇತಿಹಾಸ ನಂಬಿಕೆಗಳು ಯುವ ಜನಾಂಗದ ಮೂಲಕ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳವಬೇಕು.
ನೀತಿಯ ಸಮಾಜ ಕಟ್ಟುವ ಸ್ವಾಮೀಜಿಯವರ ಅವಶ್ಯಕತೆಯಿದೆ-ಮೋಹನದಾಸ ಸ್ವಾಮೀಜಿ:
ಮೋಹನದಾಸ ಸ್ವಾಮಿಜಿ ಮಾತನಾಡಿ, ಧರ್ಮ, ದೇಶದ ಉಳಿವಿಗಾಗಿ ನಮ್ಮ ಕರ್ತವ್ಯದ ಬಗ್ಗೆ ಯೋಚಿಸಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು. ಪವಿತ್ರ ಮಣ್ಣಿನ ಬಗ್ಗೆ ಅರ್ಥಮಾಡಿ ಜೀವನದಲ್ಲಿ ಬದ್ಧತೆ ನೀಡುವ ಕಾರ್ಯವಾಗಬೇಕು. ಆರಾಧನೆಯ ಬಗ್ಗೆ ಮಕ್ಕಳಿಗೆ ತಿಳಿಸದೇ ಇರುವುದರಿಂದ ಅದರ ಮಹತ್ವ ಕಳೆದುಕೊಳ್ಳುತ್ತಿದ್ದೇವೆ. ಮಠ ಮಂದಿರಗಳು ಸಡೃಢವಾಗದಿದ್ದರೆ ಹಿಂದು ಸಮಾಜದ ಭದ್ರವಾಗಲು ಸಾಧ್ಯವಿಲ್ಲ. ದೃಢ ಚಿತ್ತ ನಮ್ಮಲ್ಲಿರಬೇಕು. ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಜಾತಿಗೊಬ್ಬ ಸ್ವಾಮೀಜಿಯಲ್ಲ. ನೀತಿಯ ಸಮಾಜ ಕಟ್ಟುವ ಸ್ವಾಮೀಜಿಯವರ ಆವಶ್ಯಕತೆಯಿದೆ. ರಾಷ್ಟ್ರದ ಒಳಿತಿಗಾಗಿ ನಾವೆಲ್ಲಾ ಒಂದಾಗಬೇಕು ಎಂದರು.
ಬ್ರಹ್ಮರ ಗುಂಡದಲ್ಲಿ ಭವ್ಯ ಮಂದಿರದ ಮೂಲಕ ಇತಿಹಾಸ ನಿರ್ಮಿಸಬೇಕು-ಎಸ್ ಅಂಗಾರ:
ಮಾಜಿ ಸಚಿವ ಎಸ್. ಅಂಗಾರ ಮಾತನಾಡಿ, ಮೊಗೇರ ಸಮುದಾಯವು ಅಸ್ತಿ ಸಂಪತ್ತಿಗೆ ಮಹತ್ವ ನೀಡಿದ ಸಮಾಜವಲ್ಲ. ಭಕ್ತಿಗೆ ಮಹತ್ವ ನೀಡಿದ್ದು ಸಮುದಾಯದ ಸೇವೆಗಳನ್ನು ಚಾಚು ತಪ್ಪದೆ ಮಾಡಿದೆ. ಮುಗ್ದತೆ, ಭಯ ಭಕ್ತಿ ಇರುವ ವ್ಯಕ್ತಿಗಳಿಗೆ ದೈವ ದೇವರು ಒಲಿಯುತ್ತಿದಾರೆ. ದೈವ ಚಿತ್ತದಂತೆ ಬ್ರಹ್ಮರ ಗುಂಡದಲ್ಲಿ ಭವ್ಯ ಮಂದಿರದ ಮೂಲಕ ಇತಿಹಾಸ ನಿರ್ಮಿಸಬೇಕು. ಎಲ್ಲರಲ್ಲಿಯೂ ತ್ಯಾಗದ ಮನೋಭಾವ ಮುಖ್ಯವಾಗಿರಬೇಕು. ನಮ್ಮ ಉದ್ದೇಶ ವಿಚಾರಗಳಿಗೆ ಮಹತ್ವದ ನೀಡಬೇಕು ಎಂದರು.
ಸಂಕಲ್ಪದಂತೆ 9 ತಿಂಗಳಲ್ಲಿ ಪೂರ್ಣಗೊಳ್ಳಲಿ-ನಳೀನ್ ಕುಮಾರ್ ಕಟೀಲ್:
ಮಾಜಿ ಸಂಸದ ನಳಿನ್ಕುಮಾರ್ ಕಟೀಲು ಮಾತನಾಡಿ, ಮಾಣಿಲ, ಸುಂದರ ಪ್ರಕೃತಿ ರಮಣೀಯ ತಾಣದಲ್ಲಿ ಬ್ರತಹ್ಮರಗುಂಡ ಮೊಗೇರ್ಕಳ ಆರಾಧನೆ ಜೊತೆಗೆ ಪುನರ್ನಿರ್ಮಾಣದ ಕಾರ್ಯ ಆರಂಭವಾಗಿದೆ. ಮಾಣಿಲ, ಎಡನೀರು ಕ್ಷೇತ್ರದ ಸ್ವಾಮೀಜಿಯವರು ಶಿಲಾನ್ಯಾಸ ನಡೆಸಿದ ಎಲ್ಲಾ ಕ್ಷೇತ್ರಗಳು ಶೀಘ್ರವಾಗಿ ನಿರ್ಮಾಣಗೊಂಡಿದ್ದು ಬ್ರಹ್ಮರಗುಂಡದಲ್ಲಿಯೂ ನಿಮ್ಮ ಸಂಕಲ್ಪದಂತೆ 9 ತಿಂಗಳಲ್ಲಿ ಸಂಕಲ್ಪಿ ಕ್ಷೇತ್ರಗಳ ನಿರ್ಮಾಣವಾಗಲಿದೆ. ನಿಮ್ಮ ಜೊತೆಗೆ ನಾನು ಇದ್ದು ಎಲ್ಲರನ್ನು ಜೋಡಿಸಿಕೊಂಡು ಕ್ಷೇತ್ರವು ಶೀಘ್ರವಾಗಿ ನಿರ್ಮಾಣಗೊಳ್ಳಲಿ ಎಂದು ಹೇಳಿದರು.
ಜಾಗ ಉಚಿತವಾಗಿ ನೀಡಿರುವ ಬೋರ್ಕರ್ ಕುಟುಂದ ಕಾರ್ಯ ಶ್ಲಾಘನೀಯ-ಶಕುಂತಳಾ ಟಿ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಒಂದಿಂಚ್ಚು ಜಾಗ ಬಿಡದೇ ಇರುವ ಈ ಕಾಲದಲ್ಲಿ ದೈವಸ್ಥಾನ ನಿರ್ಮಾಣಕ್ಕೆ ತನ್ನ ವರ್ಗ ಜಾಗ ಬಿಟ್ಟಿರುವ ವೆಂಕಟರಮಣ ಬೋರ್ಕರ್ರವರ ಸೇವಾ ಕಾರ್ಯ ಶ್ಲಾಘನೀಯ. ಅರು ಜಿಲ್ಲೆಯವರನ್ನು ಒಟ್ಟು ಸೇರಿಸಿದ ರಾಧಾಕೃಷ್ಣ ಬೋರ್ಕರ್ರವರಿಗೆ ಉತ್ತಮ ಭವಿಷ್ಯ ದೊರೆಯಲಿದೆ. ಕ್ಷೇತ್ರಕ್ಕೆ ಬರುವ ರಸ್ತೆ ಅಭಿವೃದ್ಧಿಗೆ ಪ.ಜಾತಿ ಅನುದಾನ ಪಡೆದುಕೊಳ್ಳುವ ಕೆಲಸಾಗಬೇಕು ಎಂದು ಸಲಹೆ ನೀಡಿದರು.
ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯ-ಸಂಜೀವ ಮಠಂದೂರು:
ಸಂಜೀವ ಮಠಂದೂರು ಮಾತನಾಡಿ, ತುಳುನಾಡಿನ ಪರಂಪರೆ, ಸಂಸ್ಕೃತಿಗಳ ಕೊಡುಗೆ ನೀಡಿದ ಆದಿವಾಸ ಸಮಾಜವು ಹಿಂದು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ. ಬ್ರಹ್ಮರಗುಂಡದಲ್ಲಿ ಭವ್ಯ ದೈವ ಸಾನಿಧ್ಯ ನಿರ್ಮಾಣವಾಗುವ ಮೂಲಕ ಮೊಗೇರ ಸಮುದಾಯಕ್ಕೆ ಶಕ್ತಿ ನೀಡುವ ಜೊತೆಗೆ ಹಿಂದು ಸಮಾಜಕ್ಕೆ ಶಕ್ತಿ ಕೊಡುವ ಕಾರ್ಯವಾಗಲಿದೆ. ಈ ಮಣ್ಣು ಸಮಾಜದ ಎಲ್ಲಾ ವರ್ಗದವರನ್ನು ಸೇರಿಸುವ ಕಾರ್ಯವಾಗಿದೆ. ಇಲ್ಲಿ ನಡೆಯುವ ಕಾರ್ಯಗಳು ನಿಗದಿತ ಸಮಯಕ್ಕೆ ನಡೆಯಲಿದೆ. ಸರಕಾರ, ಸಾಮಾಜಿಕವಾಗಿ ಸಹಕಾರ ನೀಡಲಾಗುವುದು ಎಂದರು.
ಬೋರ್ಕರ್ ಕುಟುಂಬದವರು ಎಲ್ಲಾ ವಿಭಾಗದಲ್ಲೂ ತ್ಯಾಗ ಮಾಡಿದವರು-ರವೀಂದ್ರ ಶೆಟ್ಟಿ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಆದಿನಾಗಬ್ರಹ್ಮ ಮೊರ್ಗೇಕಳ ಮೂಲಸ್ಥಾನ ಹುಡುಕಾಟ ನಡೆಸಿ ಅದನ್ನು ಪತ್ತೆ ಮಾಡಿರುವುದನ್ನು ಶ್ಲಾಘಿಸಿದರು. ಬೋರ್ಕರ್ ಕುಟುಂಬದವರು ಜಾಗ ನೀಡಿರುವುದು ಮಾತ್ರವಲ್ಲದೇ ಎಲ್ಲಾ ವಿಭಾಗದಲ್ಲಿ ತ್ಯಾಗ ಮಾಡಿದವರು. ಇಲ್ಲಿ ಕ್ಷೇತ್ರ ನಿರ್ಮಾಣದಲ್ಲಿ ಎಲ್ಲಾ ಸಮುದಾಯ ಸಹಕಾರ ದೊರೆಯಲಿ ಎಂದರು.
ಧರ್ಮ ದ ಉಳಿವಿಗೆ ಇಲ್ಲಿಂದ ಮನದಟ್ಟು ಮಾಡಬೇಕಿದೆ.ಸಮಾಜದ ಋಣ ತೀರಿಸಿದ್ದೇನೆ-ವೆಂಕಟ್ರಮಣ ಬೋರ್ಕರ್:
ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ದೈವಗಳ ತವರೂರು. ಇಲ್ಲಿ ಎಲ್ಲಾ ಕಾರ್ಯಗಳು ದೈವ ಚಿತ್ತ, ಕಾಲ ನಿರ್ಣಯದಂತೆ ನಡೆಯುತ್ತಿದೆ. ಇಲ್ಲಿ ನಾವು ಜಾಗ ನೀಡಿರುವುದು ವಿಚಾರವಲ್ಲ. ನನ್ನ ಮೇಲೆ ಮೊಗೇರ ಸಮಾಜ ಋಣವಿತ್ತು. ಅದನು ತೀರಿಸಿದ್ದೇನೆ ಎಂದರು.
ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಸಂಚಾಲಕರಾಗಿರುವ ಡಾ.ರಘು ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ ಸಂಕೇಶ, ಮಾಜಿ ಅಧ್ಯಕ್ಷ ಸುಂದರ ಹೊಸಬೆಟ್ಟು, ಮೊಗೇರ ಸಾಂಸ್ಕೃತಕ ಅಧ್ಯಯನ ಟ್ರಸ್ಟ್ನ ಗೌರವಾಧ್ಯಕ್ಷ ಬಾಬು ಪಚಲಂಪಾರೆ, ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಹಾಸನ ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೃಷ್ಣ ಕಾಟ್ಟಳ್ಳಿ, ಅಣ್ಣಪ್ಪ ಬಾಳುಪೇಟೆ, ಕೊಡಗು ಮೊಗೇರ ಸಂಘದ ಅಧ್ಯಕ್ಷ ಜನಾರ್ದನ ಮಡಿಕೇರಿ, ಕಾಸರಗೋಡು ಮೊಗೇರ ಸಂಘದ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು, ಕಾಸರಗೋಡು ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಬೇಡು, ಚಿಕ್ಕಮಗಳೂರು ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೆ.ಮಾಣಿ ಕಮ್ಮರಕೋಡು ಮೂಡಿಗೆರೆ, ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಇದರ ಅಧ್ಯಕ್ಷ ವಸಂತ ಅಜಕಕ್ಕೋಡು, ಆನಂದ ಮವ್ವಾರು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ರವಿ ಪಿ.ಎಂ., ಸೋಮವಾರಪೇಟೆ ಮೊಗೇರ ಸಂಘದ ಅಧ್ಯಕ್ಷ ವಸಂತ, ಪುತ್ತೂರು ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪುಳು, ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಲಕ್ಷ್ಮಣ ಪೆರಿಯಡ್ಕ ರಾಮಪ್ಪ ಮಂಜೇಶ್ವರ, ಮಂಗಳೂರು ಮುಗೇರ ಸಂಘದ ಅಧ್ಯಕ್ಷ ತುಳಸೀದಾಸ್ ಕೂಳೂರು, ಉಡುಪಿ ಜಿಲ್ಲೆ ಮೊಗೇರ ಸಂಘದ ಅಧ್ಯಕ್ಷ ಅಪ್ಪು ಮಾರ್ನೆ, ಬೆಂಗಳೂರು ಎಂಡಬ್ಲ್ಯೂಎ ಗೌರವಾಧ್ಯಕ್ಷ ವಿಶ್ವನಾಥ ಬೆಂಗಳೂರು, ಬಂಟ್ವಾಲ ಮೊಗೇರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಬೆಳ್ತಂಗಡಿ ಮೊಗೇರ ಹಿತಚಿಂತನ ವೇದಿಕೆ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಕಡಬ ಮೊಗೇರ ಸಂಘದ ಅಧ್ಯಕ್ಷ ಶಶಿಧರ ಬೊಟ್ಯಡ್ಕ, ಮಂಗಳೂರು ಮೊಗೇರ ಕ್ರೀಡಾ ಸಂಘದ ಅಧ್ಯಕ್ಷ ಹರಿದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ಸಂಚಾಲಕ ವಿಜಯ ವಿಕ್ರಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಹಾಗೂ ತೇಜಸ್ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ಮೊಟ್ಟಿಕಲ್ಲು, ಅಣ್ಣು ಕತ್ತಲಕಾನ, ಯಜ್ಞೇಶ್ ಕಿಳಿಂಗಾರು, ಶೇಖರ್ ಕತ್ತಲಕಾನ, ಸದಾನಂದ, ರಮೇಶ್, ಅಚ್ಚುತ್ತಾ , ಬಾಲು ನುಳಿಯಾಲು, ಬಾಬು ಕತ್ತಲಕಾನ, ಗುರುವ ನುಳಿಯಾಲು, ನವೀನ್ ಸಾಮೆತ್ತಡ್ಕ, ಭಾಸ್ಕರ ಬಲ್ಮಠ, ಬಾಲಕೃಷ್ಣ, ವಸಂತ ಬ್ರಹ್ಮರಗುಂಡ, ಚಂದ್ರ ಮಡಿಕೇರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಪುಂಡಿ ಪಣವು ಸಂಗ್ರಹ:
ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರು ಮುಷ್ಠಿ ಕಾಣಿಕೆ(ಪುಂಡಿ ಪಣವು)ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಹಾಗೂ ಸಭೆಯಲ್ಲಿ ಭಾಗವಹಿಸಿದವರು ಕಾಣಿಕೆ ನೀಡಿದ್ದು ಸಭೆಯಲ್ಲಿ ಒಟ್ಟು ರೂ.26,405.50 ಸಂಗ್ರಹವಾಗಿದೆ.
ತುಂಬಿ ತುಲುಕಿದ ನಿಧಿ ಸಂಚಯನ:
ಶಿಲಾನ್ಯಾಸದಲ್ಲಿ ನಿಧಿ ಸಂಚಯನಕ್ಕೆ ಸ್ವಾಮೀಜಿಯವರು ಚಾಲನೆ ನೀಡಿದ್ದು ಆಗಮಿಸಿದ ಸಮಾಜ ಬಾಂಧವರು ನಿಧಿ ಸಂಚಯನಕ್ಕೆ ತಮ್ಮ ಕೈಲಾದ ಕೊಡುಗೆ ನೀಡಿದ್ದ ನಿಧಿ ಸಂಚಯನಕ್ಕೆ ಅಳವಡಿಸಲಾಗಿದ್ದ ಕೊಡವು ತುಂಬಿ ತುಲುಕಿದೆ.
ಬೋರ್ಕರ್ ಕುಟುಂಬದ ಕಾರ್ಯಕ್ಕೆ ಶ್ಲಾಘನೆ:
ಬ್ರಹ್ಮರಗುಂಡ ಹಾಗೂ ಮೊರ್ಗೇಕಳ ಮೂಲಸ್ಥಾನ ನಿರ್ಮಾಣಕ್ಕೆ ನಿಡ್ಪಳ್ಳಿ ಕತ್ತಲಕಾನ ರಾಧಾಕೃಷ್ಣ ಬೋರ್ಕರ್ ಹಾಗೂ ವೆಂಕಟ್ರಮಣ ಬೋರ್ಕರ್ ಕುಟುಂಬದವರು ತಮ್ಮ ಸ್ವಂತ ಜಾಗವನ್ನು ಉಚಿತವಾಗಿ ನೀಡಿರುವು ಜೊತೆಗೆ ಕಾರ್ಯಕ್ರಮದಲ್ಲಿ ಮೊಗೇರ ಸಮಾಜದವರೊಂದಿಗೆ ಸೇರಿಕೊಂಡು ಸಾನಿಧ್ಯ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರ್ಯಗಳಿಗೆ ಅತಿಥಿ, ಅಭ್ಯಾಗತರು ಶ್ಲಾಘಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಸಭಾ ಸದಸ್ಯ ಜೀವಂಧರ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಆರ್ಯಾಪು ಗ್ರಾ.ಪಂ ಸದಸ್ಯ ಯತೀಶ್ ದೇವ, ಎಂಆರ್ಪಿಎಲ್ನ ಸೀತಾರಾಮ ರೈ, ಸೇರಿದಂತೆ ಆರು ಜಿಲ್ಲೆಗಳಿಂದ ಆಗಮಿಸಿದ ಮೊಗೇರ ಸಮುದಾಯದ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಊಟ, ಉಪಾಹಾರವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.
ಆದಿ ಮೊಗೇರ್ಕಳ ದೈವಗಳ ಬಗ್ಗೆ ಸಂಧಿ ಪಾಡ್ದನದಲ್ಲಿರುವ ಆಧಾರದಂತೆ ಮೂಲ ಸಾನಿಧ್ಯವನ್ನು ಹುಡುಕಿಕೊಂಡು ಬಂದಿದ್ದಾರೆ. ಸಾನಿಧ್ಯದ ಬಗ್ಗೆ ಮೂರು ಪ್ರಶ್ನಾ ಚಿಂತನೆಗಳು ನಡೆದಿದೆ. ಕ್ಷೇತ್ರ ನಿರ್ಮಾಣಕ್ಕೆ ಬೋರ್ಕರ್ ಕುಟುಂಬದ ವರ್ಗ ಜಾಗವನ್ನು ಉಚಿತವಾಗಿ ನೀಡಲಾಗಿದೆ. ಮುಂದೆ ಕ್ಷೇತ್ರದಲ್ಲಿ ಬ್ರಹ್ಮರ ದೇವಸ್ಥಾನ, ಮೊಗೇರ್ಕಳ ಗುಡಿ, ಸಭಾ ಭವನ ಮೂಲಭೂತ ಸೌಲಭ್ಯಗಳ ನಿರ್ಮಾಣ ಸೇರಿದಂತೆ ಒಟ್ಟು ರೂ. 2 ಕೋಟಿಯಲ್ಲಿ ಪುನರ್ ನಿರ್ಮಾಣದ ಕಾಮಗಾರಿಗಳು ನಡೆಯಲಿದೆ. ಮುಂದಿನ 9 ತಿಂಗಳಲ್ಲಿ ಕ್ಷೇತ್ರದ ನಿರ್ಮಾಣ ಕಾರ್ಯಗಳು ನಡೆದು ಬ್ರಹ್ಮಕಲಶೋತ್ಸವ ನಡೆಸುವ ನಿರೀಕ್ಷೆಯಿದೆ. ಬೋರ್ಕರ್ ಕುಟುಂಬ ಈ ಕಾರ್ಯಕ್ರಮದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದೆ.
-ರಾಧಾಕೃಷ್ಣ ಬೋರ್ಕರ್, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ
ಎಲ್ಲಾ ದೈವಗಳ ಮೂಲ ಬ್ರಹ್ಮರು. ಸಂದಿಯಲ್ಲಿರುವ ಉಲ್ಲೇಖಕ್ಕೂ ಇಲ್ಲಿ ನಡೆದಿರುವ ಘಟನೆಗೂ ನಿಕಟ ಸಂಬಂದವಿದೆ. ಮೂಲ ಸಾನಿಧ್ಯ ಹುಡುಕ್ಕಾಟಕ್ಕೆ ಹಲವು ವರ್ಷಗಳ ಇತಿಹಾಸವಿದೆ. 2002ರಲ್ಲಿ ನಡೆದ ಸಭೆಯಲ್ಲಿ ಚರಿತ್ರೆಯ ಪ್ರಮುಖ ತಿರುವು ಪಡೆಯಿತು. ನಂತರವೂ ಹಡುಕಾಟ ಮುಂದುವರಿಸಿದ್ದು ಅದರ ಬೆನ್ನೆಲು ದೊರೆತಿದೆ. ಮೂರು ಬಾರಿಚರಿತ್ರೆ ಪುಸ್ತಕ ಬಿಡುಗಡೆಯಾಗಿದೆ. ಬ್ರಹ್ಮರಗುಂಡವು ಐಕ್ಯವಾಗಿ ದೈವತ್ವ ಪಡೆದ ಜಾಗವಾಗಿದೆ. ಭಾರತದ ಇತಿಹಾಸದ ಭೂಪಟದಲ್ಲಿ ಬ್ರಹ್ಮರ ಗುಂಡ ಎಂದು ಹೆಸರು ಇರುವುದು ಇಲ್ಲಿಗೆ ಮಾತ್ರ. ಬೇರೆಲ್ಲಿಯೂ ಇಲ್ಲ. ಮೂಲಸ್ಥಾನ ನಿರ್ಮಾಣಕ್ಕೆ ತಮ್ಮ ವರ್ಗ ಜಾಗವನ್ನು ಉಚಿತವಾಗಿ ನೀಡುವ ಜೊತೆಗೆ ಮೂಲಸ್ಥಾನ ನಿರ್ಮಾಣದಲ್ಲಿ ಬೋರ್ಕರ್ ಕುಟುಂಬದ ಸಂಪೂರ್ಣ ಸಹಕಾರ ದೊರೆತಿದೆ.
-ವಿಜಯ ವಿಕ್ರಮ್, ಸಂಚಾಲಕರು ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್