ಕಾಣಿಯೂರು :-ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದ್ದು, ಸಂಸ್ಥೆಯ ವಿದ್ಯಾರ್ಥಿನಿ ಹನ್ಸಿಕ ಕನ್ನಡದಲ್ಲಿ 125 ,ಇಂಗ್ಲಿಷ್ ನಲ್ಲಿ 100, ತುಳುವಿನಲ್ಲಿ 100 , ಗಣಿತದಲ್ಲಿ 100 ,ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳೊಂದಿಗೆ 625 ರಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ವಾಸಪ್ಪ ಶೆಟ್ಟಿಗಾರ ಮತ್ತು ವೈಶಾಲಿ ದಂಪತಿಗಳ ಸುಪುತ್ರಿ.
Home ಇತ್ತೀಚಿನ ಸುದ್ದಿಗಳು ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಹನ್ಸಿಕ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ...