ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ್ದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1ರ ಫಲಿತಾಂಶ ಮೇ. 2 ಶುಕ್ರವಾರ (ಇಂದು) ಪ್ರಕಟವಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಬೆಂಗಳೂರಿನ KSEAB ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಧ್ಯಾಹ್ನ 12-30 ಗಂಟೆಯ ನಂತರ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ ಸ್ಥಾನ ಹಾಗೂ ಕಲಬುರಗಿ ಜಿಲ್ಲೆಯು ಕೊನೆ ಸ್ಥಾನ ಪಡೆದುಕೊಂಡಿದೆ.
ಆನ್‌ಲೈನ್ ಮೂಲಕ ಫಲಿತಾಂಶ ಪಡೆಯುವುದು ಹೇಗೆ?
- ಅಧಿಕೃತ ವೆಬ್‌ಸೈಟ್‌ಗಳು: https://karresults.nic.in/ ಅಥವಾ kseab.karnataka.gov.in ಗೆ ಲಾಗಿನ್ ಮಾಡಿ.
- ‘SSLC ಫಲಿತಾಂಶ 2025’ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಮತ್ತು ಸಬ್‌ಮಿಟ್ ಬಟನ್ ಒತ್ತಿ.
- ತಕ್ಷಣವೇ ನಿಮ್ಮ ವಿಷಯವಾರು ಅಂಕಗಳು ಸ್ಕ್ರೀನ್ ಮೇಲೆ ಪ್ರದರ್ಶನಗೊಳ್ಳುತ್ತದೆ.
- ಫಲಿತಾಂಶವನ್ನು ಡೌನ್‌ಲೋಡ್ ಅಥವಾ ಪ್ರಿಂಟ್ ಮಾಡಿಕೊಳ್ಳಬಹುದು.