ಸಂಗೀತ ನೃತ್ಯ ಏಕಕಾಲಕ್ಕೆ ಒಲಿಯುವುದು ಕಷ್ಟ – ಕೆ.ಚಂದ್ರಶೇಖರ ನಾವಡ
ಪೆರ್ನಾಜೆ: ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮಿ ಇವರ ಶಿಷ್ಯೆ ಕು| ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರ ಭರತನಾಟ್ಯ ರಂಗಪ್ರವೇಶದ ಸಭಾಕಾರ್ಯಕ್ರಮವು ವಿಟ್ಲ ಗಾರ್ಡನ್ ಆಡಿಟೋರಿಯಂನಲ್ಲಿ ಮೇ.1ರಂದು ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ರಂಗಪ್ರವೇಶವು ನಿಂತ ನೀರಾಗದೆ ನಾದವು ನಿರಂತರ ಹರಿಯುತ್ತಿರಬೇಕು. ರಂಗಪ್ರವೇಶ ಎಂದರೆ ಪ್ರಾರಂಭವಷ್ಟೇ ಇದನ್ನು ಗ್ರಾಮೀಣ ಪ್ರದೇಶದಲ್ಲಿ ಸಿಟಿ ಪಟ್ಟಣದ ಕಾರ್ಯಕ್ರಮದಂತೆ ಅದ್ದೂರಿಯಾಗಿ ನಡೆದಿದ್ದು, ಒಂದು ಸುಂದರ ಕುಸುಮವಾಗಿ ಅರಳಿದೆ ಇದೀಗ ರಂಗಪ್ರವೇಶ ಕಾರ್ಯಕ್ರಮಗಳು ವಿರಳವಾಗುತ್ತಿದ್ದು. ಅಲ್ಲೊಂದು ಇಲ್ಲೊಂದು ಅಷ್ಟೇ ಇತ್ತೀಚೆಗೆ ಜಾತ್ರೆ ಬ್ರಹ್ಮ ಕಳಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ಸೇವೆಗೆ ಸೀಮಿತವಾಗಿದೆ ಕಲೆಗೆ ಬೆಲೆ ಕಟ್ಟಲಾಗದು ಎನ್ನುವ ನಾವು ವೇದಿಕೆಯಲ್ಲಿ ವೇದಿಕೆಯಲ್ಲಿರುವ ಅತಿಥಿಗಳು ಎಲ್ಲಾ ಕಿಂಚಿತ್ತಾದರು ಪ್ರೋತ್ಸಾಹ ಕೊಡಿ ಎಂದರು.
ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ ನೇತೃತ್ವದಲ್ಲಿ ವೇದಮೂರ್ತಿ ಮಹೇಶ್ ಪರಕ್ಕಜೆ ದೀಪ ಪ್ರಜ್ವಲನೆಗೈದು ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಸಿದ್ಧ ಮೃದಂಗವಾದಕ ವಿದ್ವಾನ್ ಡಾ. ವಿ.ಆರ್. ನಾರಾಯಣ್ ಪ್ರಕಾಶ್ ಕಲ್ಲಿಕೋಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು, ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ, ವಿಟ್ಲ ಅರಮನೆಯ ಕೆ.ಕೃಷ್ಣಯ್ಯ, ವಿಟ್ಲ ಶ್ರೀ ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಸವಿತಾ ಕೋಡಂದೂರು ನೇತೃತ್ವ ವಹಿಸಿದ್ದರು. ಕುಂಬಳೆ ನಾಟ್ಯ ವಿದ್ಯಾನಿಲಯದ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಇವರಿಗೆ ಗುರುವಂದನೆ ನಡೆಯಿತು. ರಘುರಾಮ ಶಾಸ್ತ್ರಿ ಕೋಡಂದೂರು ಸ್ವಾಗತಿಸಿದರು. ಕುಮಾರ್ ಪೆರ್ನಾಜೆ ವೇಮು ಗೋಪಾಲಕೃಷ್ಣ ಭಟ್, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು ಮುಂತಾದದವರು ಅತಿಥಿಗಳನ್ನು ಶಾಲು ಸ್ಮರಣಕ್ಕೆಗಳನ್ನು ನೀಡಿ ಗೌರವಿಸಿದರು, ವಿದುಷಿ ಸಿಂಚನಾ ಲಕ್ಷ್ಮಿ ಕೋಡಂದೂರು ವಂದಿಸಿದರು.