





ಕಾಣಿಯೂರು :-ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದ್ದು, ಸಂಸ್ಥೆಯ ವಿದ್ಯಾರ್ಥಿನಿ ಹನ್ಸಿಕ ಕನ್ನಡದಲ್ಲಿ 125 ,ಇಂಗ್ಲಿಷ್ ನಲ್ಲಿ 100, ತುಳುವಿನಲ್ಲಿ 100 , ಗಣಿತದಲ್ಲಿ 100 ,ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳೊಂದಿಗೆ 625 ರಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ವಾಸಪ್ಪ ಶೆಟ್ಟಿಗಾರ ಮತ್ತು ವೈಶಾಲಿ ದಂಪತಿಗಳ ಸುಪುತ್ರಿ.










