ಉಪ್ಪಿನಂಗಡಿ: ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ 2024–25ನೇ ಸಾಲಿನ SSLC ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆ ಮಾಡಿದ್ದು, ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಒಟ್ಟು 48 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ಮತ್ತು 32 ಮಂದಿ ಪ್ರಥಮ ದರ್ಜೆಯಲ್ಲಿ ಹಾಗೂ
4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಶಾಲೆಯ ಪ್ರಥಮ ಸ್ಥಾನವನ್ನು ಮುಹಮ್ಮದ್ ಮಿಕ್ದಾದ್ ಅವರು 592 ಅಂಕ ಗಳಿಸಿದ್ದಾರೆ. ದ್ವಿತೀಯ ಸ್ಥಾನ ಮರಿಯಮ್ ಸಫಾ (583) ಅಂಕಗಳು, ಮತ್ತು ತೃತೀಯ ಸ್ಥಾನ ಮಹಮ್ಮದ್ ಸಮಿ( 577) ಅಂಕಗಳು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಇತರ ವಿದ್ಯಾರ್ಥಿಗಳಲ್ಲಿ ಅಫೀಫಾ ಆಯಿಷಾ – 574 ಅಂಕ, ಮೊಹಮ್ಮದ್ ಸ್ವಾಲಿಹ್ 571 ಅಂಕ, ಲಿಯಾನ ಫಾತಿಮಾ– 565 ಅಂಕ, ಮಹಮ್ಮದ್ ಸಮ್ಮಾಝ್ – 553 ಅಂಕ, ಯು.ಕೆ ಅನೀನಾ – 551 ಅಂಕ ಗಳಿಸಿದ್ದಾರೆ. ಶಝಾ ಫಾತಿಮಾ-541, ಕೆ.ಎಂ ಅಸೀಮಾ ತಸ್ನೀಮ್-540, ಮಹಮ್ಮದ್ ಸಾಲಿಹ್-535,ಮಹಮ್ಮದ್ ಹಾಶಿರ್-530 ಅಂಕ ಗಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದು, ಈ ಯಶಸ್ಸು ಮುಂದಿನ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿ ಎಂದು ಶುಭಕೋರಿದೆ.