ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ 97 ಶೇಕಡಾ ಫಲಿತಾಂಶ – ಗಗನ್ ಎಸ್ ಮತ್ತು ನಿಶ್ಮಿತಾ ಎನ್ 621 ಅಂಕ, ಶಾಲೆಗೆ ಎ ಗ್ರೇಡ್ ಗುಣಾತ್ಮಕ ಫಲಿತಾಶ 84.90

0

ಪುತ್ತೂರು: ಎಪ್ರಿಲ್ 2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಆಂಗ್ಲ ಮಾಧ್ಯಮದಲ್ಲಿ ಹಾಜರಾದ 61 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇಕಡಾ 96.72 ಫಲಿತಾಂಶ ದಾಖಲಾಗಿದೆ. ಎ+ 11, ಎ 16, ಬಿ+ 17, ಬಿ 11 ಹಾಗೂ 4 ವಿದ್ಯಾರ್ಥಿಗಳು ಸಿ+ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಪ್ರಥಮ ಸ್ಥಾನವನ್ನು ಗಗನ್ ಎಸ್ – 621 (ಕುರಿಯ ಮೋನಪ್ಪ ಗೌಡ ಮತ್ತು ಯಶೋದಾ ರವರ ಪುತ್ರ) ಮತ್ತು ನಿಶ್ಮಿತಾ – 621 (ಕೊಡಿಪ್ಪಾಡಿ ಎಂ ನಾಮದೇವ ಆಚಾರ್ಯ ಮತ್ತು ಜಯಲಕ್ಷ್ಮಿ ಎನ್ ರವರ ಪುತ್ರಿ) ದ್ವಿತೀಯ ಸ್ಥಾನವನ್ನು ಭಾವನಾ ಪಿ- 613 (ಚಿಕ್ಕಮುಡ್ನೂರು ಪಿ ಜನಾರ್ಧನ ಗೌಡ ಮತ್ತು ಮಾಲತಿ ಪಿ ರವರ ಪುತ್ರಿ) ಮತ್ತು ತೃತೀಯ ಸ್ಥಾನವನ್ನು ಅವನಿ ನಾಯಕ್ -609 (ನೂಜಿತೆಂಕಿಲ ಕೆ ವಿನಾಯಕ ನಾಯಕ್ ಮತ್ತು ಧನಲಕ್ಷ್ಮಿ ರವರ ಪುತ್ರ್ರಿ) ಪಡೆದಿರುತ್ತಾರೆ.

ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 94.52 ಫಲಿತಾಂಶ ಪಡೆದಿದೆ. ಎ+4, ಎ 11, ಬಿ+ 19, ಬಿ 26, 9 ವಿದ್ಯಾರ್ಥಿಗಳು ಸಿ+ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ಕುಶಿತ್ ಆರ್ ಗೌಡ – 609 (ಚಿಕ್ಕಮುಡ್ನೂರು ರಾಜೇಶ್ ಮತ್ತು ನಳಿನಿ ಕೆ ರವರ ಪುತ್ರ), ದ್ವಿತೀಯ ಸ್ಥಾನವನ್ನು ಸಾಮ್‌ವೇಲ್ – 596 (ಜಿಡೆಕಲ್ಲು ಹರೀಶ್ ಮತ್ತು ಲಕ್ಷ್ಮಿ ಯವರ ಪುತ್ರ) ಮತ್ತು ತೃತೀಯ ಸ್ಥಾನವನ್ನು ಶ್ರೇಯಾ – 574 (ಇಡ್ಕಿದು ರಾಜೇಶ್ ಮತ್ತು ರಜಿತಾ ಯವರ ಪುತ್ರಿ) ಪಡೆದಿರುತ್ತಾರೆ.
ಯಶ್ವಿತ -596 (ಮೋಹನ್ ಕುಲಾಲ್ ಮತ್ತು ನಯನ ರವರ ಪುತ್ರಿ) ವಿದಿಶಾ – 594 (ಪಡ್ನೂರು ಕೊರಗಪ್ಪ ಪೂಜಾರಿ ಮತ್ತು ಸುಪ್ರೀತಾ ರವರ ಪುತ್ರಿ), ಗೌತಮಿ ಸಿ -591 (ಬಲ್ನಾಡು ಚಂದ್ರಹಾಸ ಕುಲಾಲ್ ಮತ್ತು ಹರಿಣಿ ರವರ ಪುತ್ರಿ), ಹರ್ಷಿತಾ -590 (ಚಿಕ್ಕಮುಡ್ನೂರು ಹರೀಶ್ ಮತ್ತು ಸವಿತಾ ರವರ ಪುತ್ರಿ), ಕ್ಷಿತಿ -587 (ಕೆಯ್ಯೂರು ಶಿವರಾಮ ರೈ ಮತ್ತು ಚಿತ್ರಲೇಖ ರವರ ಪುತ್ರಿ), ಅಕ್ಷಯ್ ಗಣೇಶ್ ಕೆ – 585 (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್ ರವರ ಪುತ್ರ) ಅಸ್ಮಿತಾ ಬಿ ಎಲ್-580 (ದರ್ಬೆ ಬಿ ಎನ್ ಲಕ್ಷ್ಮಿನಾರಾಯಣ ಮತ್ತು ಆಶಾಲತಾ ರವರ ಪುತ್ರಿ) ಸಂದೇಶ್ -568 (ಆರ್ಯಾಪು ಸುರೇಶ್ ನಾಯಕ್ ಎನ್ ಮತ್ತು ಅನಿತಾ ರವರ ಪುತ್ರ) ಅಂಕಗಳನ್ನು ಪಡೆದು ವಿಶಿಷ್ಟತಾ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here