ಪುತ್ತೂರು:2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಶ ಪ್ರಕಟಗೊಂಡಿದ್ದು ಪುತ್ತೂರು ತಾಲೂಕು ಶೇ.94.09 ಫಲಿತಾಂಶದೊಂದಿಗೆ ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಪುತ್ತೂರು ಹಾಗೂ ಕಡಬ ತಾಲೂಕುಗಳ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ 82 ಶಾಲೆಗಳಿಂದ ಒಟ್ಟು 4582 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 4311 ಮಂದಿ ಉತ್ತೀರ್ಣರಾಗಿದ್ದಾರೆ.
ಬಂಟ್ವಾಳ ಶೇ.87.41, ಬೆಳ್ತಂಗಡಿ ಶೇ.92.82, ಮಂಗಳೂರು ಉತ್ತರ ಶೇ.91.74, ಮಂಗಳೂರು ದಕ್ಷಿಣ ಶೇ.89.43, ಮೂಡಬಿದರೆ ಶೇ.93.44, ಪುತ್ತೂರು ಶೇ.94.04 ಹಾಗೂ ಸುಳ್ಯ ಶೇ.91.77 ಹಾಗೂ ಫಲಿತಾಂಶ ಪಡೆದುಕೊಂಡಿದೆ. ದ.ಕ ಜಿಲ್ಲೆಗೆ ಶೇ.91.11 ಫಲಿತಂಶ ಪಡೆದುಕೊಂಡಿದೆ.