ಪುತ್ತೂರು: ಶಾಲಾ-ಕಾಲೇಜು ಲೇಖನ ಸಾಮಾಗ್ರಿಗಳ ಹಾಗೂ ಸಭೆ ಸಮಾರಂಭಗಳ ಆಲಂಕಾರಿಕ ಐಟಂಗಳ ಬೃಹತ್ ಮಳಿಗೆಯು ಜೊತೆಗೆ ಅತಿ ಹೆಚ್ಚಿನ ಸಂಗ್ರಹ ಹಾಗೂ ವಿವಿಧ ಆಯ್ಕೆಗಳ ಶಿವಕೃಪಾ ಟ್ರೇಡರ್ಸ್ ಮಳಿಗೆಯು ಮೇ.3ರಂದು ಬೊಳುವಾರು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಎದುರಿನ ಪಿ.ಎಸ್ ನಾಯಕ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಿರಿಯರ ಹಾಗೂ ಗಣ್ಯರ ಆಶೀರ್ವಾದದಿಂದ ಮಳಿಗೆಯ ಮಾಲಕ ಧರೇಶ್ ರವರು ಹೊಸ ವ್ಯವಹಾರವನ್ನು ಆರಂಭಿಸಿರುತ್ತಾರೆ. ಧರ್ಮವನ್ನು ಪ್ರೀತಿಸಿದಾಗ ಆಗ ಧರ್ಮ ನಮ್ಮನ್ನು ರಕ್ಷಿಸುತ್ತದೆ. ವ್ಯವಹಾರದಲ್ಲಿ ಪರಸ್ಪರ ನಂಬಿಕೆ ಜೊತೆಗೆ ಗುಣಾತ್ಮಕತೆ ಬಹಳ ಮುಖ್ಯವಾಗಿದೆ. ನಾವು ದೇವರನ್ನು ಜೊತೆಯಲ್ಲಿ ಇಟ್ಟುಕೊಂಡು ಪೂಜಿಸಿದಾಗ ದೇವರು ನಮ್ಮ ಜೊತೆ ಸದಾ ಇರುತ್ತಾನೆ ಎಂದು ಹೇಳಿ ಶುಭ ಹಾರೈಸಿದರು. ಪುತ್ತಿಲ ಪರಿವಾರ ಟ್ರಸ್ಟ್ ಇದರ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಮಳಿಗೆಯ ಮಾಲಕ ಧರೇಶ್ ರವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಮಾತ್ರವಲ್ಲ ಧಾರ್ಮಿಕ ಕ್ಷೇತ್ರದ ದೇವತಾ ಕಾರ್ಯದಲ್ಲೂ ತೊಡಗಿಸಿಕೊಂಡಿರುತ್ತಾರೆ. ವ್ಯವಹಾರದಲ್ಲಿ ಸ್ಪರ್ಧೆ ಇದೆ. ಆದರೆ ಯಾರು ಪಾರದರ್ಶಕವಾದ ವ್ಯವಹಾರವನ್ನು ಗ್ರಾಹಕರಿಗೆ ನೀಡುತ್ತಾರೋ ಅವರು ವ್ಯವಹಾರದಲ್ಲಿ ಯಶಸ್ಸು ಗಳಿಸುತ್ತಾರೆ. ಮಾಲಕ ಧರೇಶ್ ಹೊಳ್ಳರವರ ಮಾಲೀಕತ್ವದಲ್ಲಿ ಇನ್ನೂ ಅನೇಕ ಸಂಸ್ಥೆಗಳು ಹುಟ್ಟಿಕೊಳ್ಳಲಿ ಎಂದರು.
ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರವರ ದಿವ್ಯಹಸ್ತದಿಂದ ನೂತನ ಮಳಿಗೆಯು ಉದ್ಘಾಟನೆಗೊಂಡಿರುವುದು ಶುಭದಾಯಕವಾಗಿದೆ. ಧರೇಶ್ ರವರೋರ್ವ ಸಂಘಟನಾ ಚತುರ, ಅವರದ್ದೇ ಆದ ಸಮಾನಮನಸ್ಕ ಯುವಕರ ತಂಡವಿದ್ದು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಗುಣ ಅವರಲ್ಲಿದೆ ಎಂದರು.ಮದಗ ಜನಾರ್ದನ ದೇವಸ್ಥಾನದ ಪೂರ್ವಾರ್ಚಕರಾದ ಕುಂಜಾರು ನರಸಿಂಹ ಮಯ್ಯರವರು ಗಣಪತಿ ಹೋಮ, ಲಕ್ಷ್ಮೀ ಪೂಜೆಯನ್ನು ನೆರವೇರಿಸಿ ಮಾತನಾಡಿ, ಒಳ್ಳೆಯ ಮುಹೂರ್ತದಲ್ಲಿ ಅರ್ಚಕರಾದ ಅಸ್ರಣ್ಣರವರು ದೀಪ ಬೆಳಗಿಸುವ ಮೂಲಕ ಮುಂದಿನ ದಿನಗಳಲ್ಲಿ ಮಳಿಗೆಯು ಯಶಸ್ಸಿನತ್ತ ಮುಂದುವರೆಯಲಿ ಎಂದು ಆಶೀರ್ವಚಿಸಿದ್ದಾರೆ. ಮಳಿಗೆಯು ಮುಂದಿನ ದಿನಗಳಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.
ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪ್ರಸಾದ್ ಇಂಡಸ್ಟ್ರಿ ಮಾಲಕ ಶಿವಪ್ರಸಾದ್, ಸಿಝ್ಲರ್ ಫ್ರೆಂಡ್ಸ್ ಪುತ್ತೂರು ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿ, ಉಪ್ಪಿನಂಗಡಿ ಆದಿತ್ಯ ಹೊಟೇಲ್ ಮಾಲಕ ನಾರಾಯಣ ಹೇರಳೆ, ಬೊಳ್ವಾರು ನಾಯಕ್ಸ್ ಕಂಪೌಂಡ್ ಪಂಚಮಿ ಎಂಟರ್ಪ್ರೈಸ್ ಮಾಲಕ ಶಿವಪ್ರಸಾದ್ ಆರ್ಯಾಪು, ಮಳಿಗೆಯ ಮಾಲಕ ಧರೇಶ್ ಹೊಳ್ಳರವರ ತಂದೆ ಶಿವಕೃಪಾ ಜನರಲ್ ಸ್ಟೋರ್ ಮಾಲಕ ನಾಗೇಶ್ ರಾವ್, ತಾಯಿ ಸುಧಾ ಎನ್.ರಾವ್ , ಹಾಗೂ ಕುಟಂಭಿಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಳಿಗೆಯಲ್ಲಿ ಏನೇನಿದೆ….
ಮಳಿಗೆಯಲ್ಲಿ ಪಿಯುಸಿ ಹಾಗೂ ಪದವಿಯ ಪಠ್ಯ ಪುಸ್ತಕಗಳು, ಶಾಲಾ ಬ್ಯಾಗ್, ಗೈಡ್ಸ್, ನೋಟ್ ಪುಸ್ತಕ, ಎಲ್ಲಾ ತರಹದ ಡೈಜೆಸ್ಟ್, ಸ್ಟೇಷನರಿ, ಕೊಡೆಗಳು, ಬಂಟಿಂಗ್ಸ್, ಬಾವುಟಗಳು, ಮೊಮೆಂಟೋಸ್, ಈವೆಂಟ್ಸ್ ಐಟಮ್ಸ್, ಫೆಸ್ಟಿವಲ್ ಡೆಕೋರೇಶನ್, ಬರ್ಥ್ ಡೇ ಡೆಕೋರೇಶನ್ ಐಟಮ್ಸ್ ಇತ್ಯಾದಿಗಳು ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಳಿಗೆಯ ಮಾಲಕ ಧರೇಶ್ ಹೊಳ್ಳ(9740196706, 9071358521) ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಗೌರವಾರ್ಪಣೆ:
ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರವರನ್ನು ಮಳಿಗೆಯ ವತಿಯಿಂದ ಮದಗ ಜನಾರ್ದನ ದೇವಸ್ಥಾನದ ಪೂರ್ವಾರ್ಚಕರಾದ ಕುಂಜಾರು ನರಸಿಂಹ ಮಯ್ಯರವರು ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು.
ಸಹ ಸಂಸ್ಥೆ..-ಶಿವಕೃಪಾ ಜನರಲ್ ಸ್ಟೋರ್, ಮಹಿಳಾ ಪೊಲೀಸ್ ಸ್ಟೇಷನ್ ಮುಂಭಾಗ, ಪುತ್ತೂರು-ಹೊಳ್ಳ ಕ್ರ್ಯಾಕರ್ಸ್ ಪುತ್ತೂರು-ಹೊಳ್ಳ ಗ್ರೂಪ್ ಪುತ್ತೂರು