ಪುತ್ತೂರು: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಸರಕಾರಿ ಪ್ರೌಢ ಶಾಲೆ ವಳಾಲು ಬಜತ್ತೂರು ಇಲ್ಲಿಗೆ 96.15% ಫಲಿತಾಂಶ ಲಭಿಸಿದೆ.
ಒಟ್ಟು 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಿಶಿಷ್ಟ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 15, ದ್ವಿತೀಯ ಶ್ರೇಣಿಯಲ್ಲಿ 4 ಜನ ತೇರ್ಗಡೆಯಾಗಿ ಶಾಲೆಯು ಗುಣಾತ್ಮಕ ಫಲಿತಾಂಶ ’ಎ ಗ್ರೇಡ್’ ಪಡೆದುಕೊಂಡಿದೆ. ಇದರಲ್ಲಿ ಸಚಿನ್ 584 (93.44%)ಅಂಕ ಪಡೆದು ಪ್ರಥಮ ಸ್ಥಾನ,ಮುರ್ಶಿದಾ 578(92.48%) ಅಂಕದೊದಿಂಗೆ ದ್ವಿತೀಯ ಸ್ಥಾನ, ಧನ್ಯಶ್ರೀ 571 (91.36%)ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕಿ ಯಶೋದಾ ಎ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.