ಪೆರಾಬೆ: ಗ್ರಾಮ ಪಂಚಾಯತ್ ಸದಸ್ಯ, ಕುಂತೂರು ಗ್ರಾಮದ ಏರ್ಮಳ ನಿವಾಸಿ ಕೃಷ್ಣ ವೈ (40ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮೇ.3ರಂದು ಬೆಳಿಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೃಷ್ಣ ವೈ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರನ್ನು ಬಳಿಕ ವೆನ್ಲಾಕ್ ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ವರದಿಯಾಗಿದೆ.
ಕೃಷ್ಣ ವೈ ರಿಕ್ಷಾ ಬಾಡಿಗೆ ಓಡಾಟ ಮಾಡುತ್ತಿದ್ದರು. ಮೃತರು ಅವಿವಾಹಿತರಾಗಿದ್ದು ಇಬ್ಬರು ಸಹೋದರರನ್ನು ಅಗಲಿದ್ದಾರೆ.