ವಿಟ್ಲ: ಇಲ್ಲಿನ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 96 ಫಲಿತಾಂಶ ಲಭಿಸಿದೆ.
ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 94 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 96 ಫಲಿತಾಂಶ ದಾಖಲಿಸಿದೆ. 38 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 49 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆದಿತ್ಯ ಡಿ.ಎ. 618, ಭ್ರಾಮರಿ ಎ. ಪೂಜಾರಿ 617, ದೀಕ್ಷಾ 614, ಶಮಿತಾ ಶೆಟ್ಟಿ 613, ಹರ್ಷ ಎಂ. 612, ಸಾಯಿಲೋಚನ್ ಎ.ಎಂ. 611, ಸ್ವೀಡಲ್ ಲಿಸಾ ಮಸ್ಕರೇನಸ್ 610, ಜಾಹ್ನವಿ 606, ಆದಿ ಆರ್ ಶಾಸ್ತ್ರಿ 606, ಸೈಫುಲ್ ಅಜ್ಮಾನ್ 603 ಅಂಕವನ್ನು ಪಡೆದಿದ್ದಾರೆ.