ಪುತ್ತೂರು: ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದರಿಂದ ಯಾರಿಗೂ ಲಾಭವಿಲ್ಲ. ದ.ಕ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅದೇ ಹೊತ್ತಿಗೆ ಕೋಮು ವೈಷಮ್ಯದಲ್ಲೂ ಮುಂಚೂಣಿಯಲ್ಲಿದೆ. ಇದು ಭವಿಷ್ಯದಲ್ಲಿ ಜಿಲ್ಲೆಗೆ ದೊಡ್ಡ ಹೊಡೆತ ನೀಡಲಿದೆ. ಎಂಆರ್ಪಿಎಲ್ ನಂತಹ ದೊಡ್ಡ ಸಂಸ್ಥೆ ನಮ್ಮ ಜಿಲ್ಲೆಗೆ ಬಂದಿರುವ ಕೊನೆಯ ಸಂಸ್ಥೆ. ಶಾಂತಿ ನೆಲೆಯೂರಿದರೆ ಮಾತ್ರ ಇಲ್ಲಿ ದೊಡ್ಡ ಕೈಗಾರಿಕೆಗಳು, ಕಂಪೆನಿಯವರು ಹೂಡಿಕೆ ಮಾಡುವರು. ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಇಲ್ಲಿ ಶಾಂತಿ ನೆಲೆಸುವುದು ಅನಿವಾರ್ಯ, ಅದು ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ.
ಪುತ್ತೂರಿಗೆ ಮೆಡಿಕಲ್ ಕಾಲೇಜು ಹಾಗೂ ಐಟಿ ಹಬ್ ಮಾಡುವ ಉದ್ದೇಶ ನಮ್ಮ ಶಾಸಕ ಅಶೋಕ್ ಕುಮಾರ್ ರೈಯವರಿಗಿದೆ. ಗಲಾಟೆ, ಕೋಮುಪ್ರಚೋದನೆ, ಬಂದ್ ಮೊದಲಾದವುಗಳು ಪದೇ ಪದೆ ಪುನರಾವರ್ತನೆಯಾದರೆ ಪುತ್ತೂರಿಗೆ ಬರುವ ಹೂಡಿಕೆಗಳು ಬಾರದಂತಾಗುತ್ತದೆ. ನಮ್ಮ ಕೈಯಾರೆ ನಾವೇ ಅಭಿವೃದ್ಧಿ ಕುಂಠಿತಗೊಳಿಸಿದಂತಾಗುತ್ತದೆ ಅಲ್ಲವೇ? ಇನ್ನಾದರೂ ನಮ್ಮ ಜನತೆ ಇದರ ಬಗ್ಗೆ ಮನಗಂಡು ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿದೆ.
-ಸುಪ್ರೀತ್ ಕಣ್ಣಾರಾಯ, ಮುಂಡೂರು
ಅಧ್ಯಕ್ಷರು ಸಾಮಾಜಿಕ ಜಾಲತಾಣ ವಿಭಾಗ, ಬ್ಲಾಕ್ ಕಾಂಗ್ರೆಸ್ ಪುತ್ತೂರು