ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅರ್ಚಕ ಸ್ಥಾನದಿಂದ ಶ್ರೀರಾಮ ಕಲ್ಲೂರಾಯ, ಸಾಮಾನ್ಯ ಸ್ಥಾನದಿಂದ ಶಿವನಾಥ ರೈ ಮೇಗಿನಗುತ್ತು, ಆನಂದ ಪೂಜಾರಿ ಕೆ, ವಿಜಯಕುಮಾರ್ ರೈ ಸರ್ವೆ, ವಸಂತ ರೈ ಸೊರಕೆ, ಉಮೇಶ್ ಎಸ್.ಡಿ, ಪ.ಜಾತಿ ಪ.ಪಂಗಡದಿಂದ ಅಶೋಕ್ ನಾಯ್ಕ ಸೊರಕೆ, ಮಹಿಳಾ ಸ್ಥಾನದಿಂದ ಸುಮತಿ ಕರ್ಮಿನಡ್ಕ ಹಾಗೂ ಕವಿತಾ ತಂಬುತ್ತಡ್ಕ ನೇಮಕಗೊಂಡಿದ್ದಾರೆ.