ಮರೀಲು ಚರ್ಚ್ ನಲ್ಲಿ 13 ಮಕ್ಕಳಿಗೆ ಪ್ರಥಮ ಪವಿತ್ರ ಪರಮಪ್ರಸಾದ

0


ಪುತ್ತೂರು: ಪುತ್ತೂರು ಹೊರ ವಲಯದ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ಮೇ.4ರಂದು 13 ಮಕ್ಕಳಿಗೆ ಪ್ರಥಮ  ಪವಿತ್ರ ಪರಮಪ್ರಸಾದ ನೀಡುವಿಕೆಯ ಶ್ರದ್ಧಾಭಕ್ತಿಯ ಕಾರ್ಯಕ್ರಮ ನೆರವೇರಿತು. ಚರ್ಚ್ ಪ್ರಧಾನ ಧರ್ಮಗುರು ವಂ|ಜೆ.ಬಿ ಮೊರಾಸ್ ರವರು ಪವಿತ್ರ ಪರಮಪ್ರಸಾದದ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಬಳಿಕ 13 ಮಕ್ಕಳಿಗೆ ಪವಿತ್ರ ಪರಮಪ್ರಸಾದವನ್ನು ನೀಡಿ ದೇವರ ಆಶೀರ್ವಾದ ಬೇಡಿದರು. ಈ ಸಂದರ್ಭದಲ್ಲಿ ಪರಮಪ್ರಸಾದ ಸ್ವೀಕರಿಸಿದ ಮಕ್ಕಳ ಹೆತ್ತವರು, ಹಿತೈಷಿಗಳು, ಕುಟುಂಬಸ್ಥರು ಈ ಧಾರ್ಮಿಕ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

LEAVE A REPLY

Please enter your comment!
Please enter your name here