ಅರಿಯಡ್ಕ: ಪೂರ್ವ ಸಂಪ್ರದಾಯದಂತೆ ಅರಿಯಡ್ಕ ಏಳ್ನಾಡುಗುತ್ತಿನ ಬಾಕಿಮಾರು ಗದ್ದೆಯಲ್ಲಿ ನಲ್ಕುರಿಯಂತೆ ನಡೆಯುವ ದೊಂಪದ ಬಲಿ ನೇಮೋತ್ಸವ ಪಿಲಿಬಂಡಿ ಉತ್ಸವದೊಂದಿಗೆ ವಿಜೃಂಭಣೆಯಿಂದ ಮೇ.4ರಂದು ನಡೆಯಿತು. ಶಿರಡಿ ದೈವದ ಭಂಡಾರ ತೆಗೆದು ಅರಿಯಡ್ಕ ಬಾಕಿ ಮಾರು ಗದ್ದೆಯ ಕೊಡಿಯಾಡಿಯಲ್ಲಿ ಏರಿಸಿ, ಎಲ್ಲಾ ಪರಿವಾರದೈವಗಳಿಗೆ ಕೋಲಗಳು, ಮತ್ತು ಗ್ರಾಮ ದೈವ ಧೂಮಾವತಿಯ ಕುತ್ಯಾಡಿ ದೈವ ಸ್ಥಾನದಿಂದ,ಭಂಡಾರ ತೆಗೆದು ಅರಿಯಡ್ಕ ಬಾಕಿ ಮಾರು ಕೊಡಿಯಾಡಿ ಯಲ್ಲಿ ಏರಿಸಿ, ಶಿರಡಿ ದೈವ, ಧೂಮಾವತಿ ದೈವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.ಸಂಜೆ ಪೂರ್ವ ಸಂಪ್ರದಾಯದಂತೆ ಮಾರಿ ಓಡಿಸುವ ಕಾರ್ಯ ಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗುತ್ತಿನ ಮನೆಯವರು,ಬಾರಿಕೆ ಮನೆಯವರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.
