ಪುತ್ತೂರು: ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ವರ್ಣಿಕಾ ಡ್ರಾಯಿಂಗ್ ಸ್ಕೂಲ್ ಕುಂಬ್ರ ಇದರ ವತಿಯಿಂದ ವರ್ಣಿಕೋತ್ಸವ ಬೇಸಿಗೆ ಶಿಬಿರವು ಮೇ.4ರಂದು ಉದ್ಘಾಟನೆಗೊಂಡಿತು.
ಸರಕಾರಿ ಪ್ರೌಢಶಾಲೆ ಪಾಪೆ ಮಜಲು ಇಲ್ಲಿಯ ಸಹ ಶಿಕ್ಷಕಿ ಸವಿತಾ ಪಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಮನೋಸ್ಥೈರ್ಯವನ್ನು ಒದಗಿಸಿಕೊಡುತ್ತದೆ. ಶಾರೀರಿಕ ಹಾಗೂ ಮಾನಸಿಕವಾಗಿ ನಮ್ಮನ್ನು ಸಬಲರನ್ನಾಗಿಸುತ್ತದೆ. ಮೊಬೈಲ್ ಚಾಳಿಯಿಂದ ನಮ್ಮನ್ನು ದೂರವಾಗಿಸುವಂತಹ ಇಂತಹ ಶಿಬಿರಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸದುಪಯೋಗಪಡಿಸಿಕೊಳ್ಳುವುದು ಅವಶ್ಯಕ ಎಂದರು.
ಶಿಬಿರದ ಪ್ರಥಮ ದಿವಸದ ಸಂಪನ್ಮೂಲ ವ್ಯಕ್ತಿಗಳಾದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ಇಲ್ಲಿಯ ಸಹ ಶಿಕ್ಷಕಿ ಭವ್ಯ ವೇಣುಗೋಪಾಲ್ ಮಕ್ಕಳಿಗೆ ಹಾಡು ನೃತ್ಯ ಮತ್ತು ಮನೋರಂಜನ ಆಟಗಳನ್ನು ಆಡಿಸಿದರು ವೇದಿಕೆಯಲ್ಲಿ ವರ್ಣಿಕ ಡ್ರಾಯಿಂಗ್ ಸ್ಕೂಲ್ ಕುಂಬ್ರ ಇದರ ಮುಖ್ಯಸ್ಥ ರಂಜಿತ್ ಕೆ.ಎಂ ಉಪಸ್ಥಿತರಿದ್ದರು.
ಶಿಬಿರಾರ್ಥಿ ಉದ್ಭವಿ ಕೋಟ್ಯಾನ್ ಪ್ರಾರ್ಥಿಸಿದರು. ಶ್ರೀಲಕ್ಷ್ಮಿಕಾಯರ್ಪದವು ಕಾರ್ಯಕ್ರಮ ನಿರೂಪಿಸಿದರು.