ಪುತ್ತೂರು: ಸ್ವಚ್ಚ ಪುತ್ತೂರು ಕಾರ್ಯಕ್ರಮದ ಜಾಗೃತಿಯ ಭಾಗವಾಗಿ ನಗರ ಸಭೆಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಚಿತ್ರ ರಚನಾ ಸ್ಪರ್ಧೆ ಯನ್ನು ಮೇ.11ರಂದು ಬೆಳಿಗ್ಗೆ 10 ಗಂಟೆಯಿಂದ ನೆಲ್ಲಿಕಟ್ಟೆಯ ಈಶ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಪ್ರಾಥಮಿಕ( ಐದನೇ ತರಗತಿಯಿಂದ ಮೇಲ್ಪಟ್ಟು) ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಪುತ್ತೂರು ನಗರ ಸಭೆಯ ವತಿಯಿಂದ ನಡೆಯುವ ಚಿತ್ರ ರಚನಾ ಸ್ಪರ್ಧೆ ಯನ್ನು ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಯೋಜಿಸಿದೆ. ಕಾರ್ಯಕ್ರಮದ ಕುರಿತಾದ ಹೆಚ್ಚಿನ ವಿವರಗಳಿಗೆ ಡಾ. ರಾಜೇಶ್ ಬೆಜ್ಜಂಗಳ(9591452414) ಈಶ ವಿದ್ಯಾಲಯ (8722293944) ರವರನ್ನು ಸಂಪರ್ಕಿಸಲು ಕೋರಲಾಗಿದೆ.