ಈಶ್ವರಮಂಗಲ : ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಮತ್ತು ಮನೆಯವರ ವತಿಯಿಂದ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಪಾರ್ತಿಸುಬ್ಬ ವಿರಚಿತ ಪಂಚವಟಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಮೇ.4ರಂದು ನಡೆಯಿತು.
ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣದೇವರಿಗೆ ಪೂಜಾರ್ಚನೆ ಸಲ್ಲಿಸಿ ಪ್ರಾರಂಭಿಸಲಾದ ಕಾರ್ಯಕ್ರಮದಲ್ಲಿ ಶೀರಾಮ ಗೀತಾಭ್ಯಾಸ ತಂಡ ಹಾಗೂ ಪೂರ್ಣಿಮಾ ಬನಾರಿ ಅವರ ಸಹಭಾಗಿತ್ವದಲ್ಲಿ ಭಗವದ್ಗೀತೆ ಪಾರಾಯಣ ನಡೆಯಿತು.

ತಾಳಮದ್ದಲೆಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ , ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ,ರಂಜಿತಾ ಆಚಾರ್ಯ ನಾರ್ಣಕಜೆ ಕಾಣಿಸಿಕೊಂಡರು. ಚೆಂಡೆಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರ ಮಂಗಲ , ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ನಾರಾಯಣ ದೇಲಂಪಾಡಿ, ಪ್ರಭಾಕರ ಆಚಾರ್ಯ ಹಿರಿಯಾಣ, ಭಾಸ್ಕರ ಮಾಸ್ತರ್ ದೇಲಂಪಾಡಿ, ನಾರಾಯಣ ಪಾಟಾಳಿ ಪಯ್ಯಾಳ, ಪೂಜಾ ಸಿ.ಎಚ್ ದೇಲಂಪಾಡಿ, ಶ್ರೀದೇವ್ ಆಚಾರ್ಯ ಈಶ್ವರ ಮಂಗಲ, ಶಾಂತಾಕುಮಾರಿ ದೇಲಂಪಾಡಿ, ಬಿ. ಎಚ್. ವೆಂಕಪ್ಪ ಗೌಡ, ಸಂಜೀವ ರಾವ್ ಮಯ್ಯಾಳ, ಪದ್ಮನಾಭ ಮಯ್ಯಾಳ ಅವರು ಭಾಗವಹಿಸಿರು. ಪೂಜಾ ಸಿ. ಎಚ್ ನಿರೂಪಿಸಿದರು, ನಂದ ಕಿಶೋರ ಬನಾರಿ ವಂದಿಸಿದರು.