ಶಿವಳ್ಳಿ ಸಂಪದ ವಾರ್ಷಿಕ ಕ್ರೀಡಾಕೂಟ – ಕ್ರಿಕೆಟ್‌ನಲ್ಲಿ ನರಿಮೊಗರು ರೈಸಿಂಗ್ ಸ್ಟಾರ‍್ಸ್ ತಂಡ ಚಾಂಪಿಯನ್

0

ಪುತ್ತೂರು: ಶಿವಳ್ಳಿ ಸಂಪದ ಪುತ್ತೂರು ಇದರ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ತೆಂಕಿಲ ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಶಿವರಾಮ ಕಲ್ಲೂರಾಯ ನಾಯಕತ್ವದ ನರಿಮೊಗರು ರೈಸಿಂಗ್ ಸ್ಟಾರ‍್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂತು. ಫೈನಲ್ ಪಂದ್ಯಾಟದಲ್ಲಿ ರೈಸಿಂಗ್ ಸ್ಟಾರ‍್ಸ್ ತಂಡದ ಪರವಾಗಿ ಪ್ರಮೋದ್ ಭಟ್ ಆಕರ್ಷಕ ಅರ್ಧ ಶತಕದ ಸಿಡಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಚಿನ್ ಪಜಿಮಣ್ಣು ನಾಯಕತ್ವದ ನರಿಮೊಗರು-ಪಜಿಮಣ್ಣು ತಂಡ ರನ್ನರ‍್ಸ್ ಅಪ್ ಸ್ಥಾನ ಪಡೆಯಿತು. ವಿಜೇತರು ಆಕರ್ಷಕವಾದ ದಿ. ಎಂ.ಕೆ. ಕೃಷ್ಣಮೂರ್ತಿ ಮೆಮೋರಿಯಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

LEAVE A REPLY

Please enter your comment!
Please enter your name here