ಬಡಗನ್ನೂರು : ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ 2024-25ನೇ ಸಾಲಿನ ಹತ್ತನೆಯ ತರಗತಿಯ ಸಾರ್ವತ್ರಿಕ ಪರೀಕ್ಷೆಯಲ್ಲಿ ಶೇಕಡ ನೂರು ಫಲಿತಾಂಶ ಸಾಧಕರಿಗೆ ಹಾಗೂ ಶಿಕ್ಷಕರಿಗೆ ಮಾತೃ ಸಂಸ್ಥೆ: ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಮೇ 7 ರಂದು ಬೆಳಗ್ಗೆ ಗಂ 11ಕ್ಕೆ ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅತಿಥಿಗಳಾಗಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸದಸ್ಯ ಗಣರಾಜ ಕುಂಬ್ಳೆ, ಪ್ರತಿಭಾ ಪ್ರೌಢಶಾಲಾ ಪೋಷಕ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಶ್ವೇಶ್ ಹಿರಣ್ಯ, ಪ್ರತಿಭಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸುಮನ ಬಿ ಭಾಗವಹಿಸಲಿದ್ದಾರೆ.