ಪುತ್ತೂರು: ಪಹಲ್ಗಾವ್ ನಲ್ಲಿ 26 ಮಂದಿ ಭಾರತೀಯ ನಾಗಕರಿಕರನ್ನು ಅಮಾನವೀಯವಾಗಿ ಕೊಂದಿರುವ ಪಾಕ್ ಭಯೋತ್ಪಾದಕರ ಹುಟ್ಟಡಗಿಸಲು ಭಾರತೀಯ ಸೇನೆ ಕೈಗೊಂಡ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು ,ಈ ಕ್ರಮ ಅಭಿನಂದನಾರ್ಹವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಗಾವ್ ಗೆ ತೆರಳಿದ್ದ ಭಾರತೀಯ ನಾಗರಿಕರನ್ನು ಭಯೋತ್ಪಾದಕರು ಅಮಾನವೀಯವಾಗಿ ಕೊಂದಿರುವುದನ್ನು ಜಗತ್ತೇ ಖಂಡಿಸಿದ್ದು, ಅವರನ್ನು ಸರ್ವ ನಾಶ ಮಾಡಬೇಕೆಂಬುದೇ ಪ್ರತೀಯೊಬ್ಬ ಭಾರತೀಯನ ಆಸೆಯೂ ಆಗಿತ್ತು. ಇದೀಗ ಭಯೋತ್ಪಾದನಾ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ಮಾಡುವ ಮೂಲಕ ಅವರನ್ನು ನಾಶ ಮಾಡಲು ಮುಂದಾಗಿದೆ. ಇದು ದಿಟ್ಟ ಕ್ರಮವಾಗಿದೆ, ಈ ದಾಳಿ ಭಯೋತ್ಪಾದಕರಿಗೆ ಪಾಠವಾಗಬೇಕು. ನಾಗರೀಕರ ಮೇಲೆ ಪದೇ ಪದೇ ಮಾಡುತ್ತಿರುವ ದಾಳಿ ಇದರಲ್ಲೇ ಕೊನೆಯಾಗಬೇಕು ಎಂದು ಶಾಸಕರು ತಿಳಿಸಿದ್ದಾರೆ. ಪಾಕ್ ವಿರುದ್ದ ಸೆಣಸಾಡುತ್ತಿರುವ ಭಾರತದ ಸೈನಿಕರಿಗೆ ದೇವರು ಶಕ್ತಿಯನ್ನು ಕೊಡಲಿ ಎಂದು ಮಾಧ್ಯಮದ ಬಳಿ ತಿಳಿಸಿದ್ದಾರೆ.