ಐಟಿಐ ತರಬೇತಿಯಿಂದಲೂ ಉನ್ನತ ಉದ್ಯೋಗ ಪಡೆಯಲು ಸಾಧ್ಯ-ನವೀನ್ ಕುಮಾರ್ ಕೆ.ಎಸ್.
ಪುತ್ತೂರು: ಎಸ್‌ಎಸ್‌ಎಲ್‌ಸಿ ಪಾಸ್, ಫೇಲ್, ಪಿಯುಸಿ ಪಾಸ್ ಫೇಲ್, ಡಿಗ್ರಿ ಪಾಸ್ ಫೇಲ್ ಹಾಗೂ ಡಿಪ್ಲೊಮಾ ಫೇಲ್ ಆದ ವಿದ್ಯಾರ್ಥಿಗಳಿಗಾಗಿ ನಿರುದ್ಯೋಗ ನಿವಾರಣೆಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಮತ್ತು ಅನುಕೂಲತೆ ಐಟಿಐ ಮಾಹಿತಿ ಕಾರ್ಯಗಾರ ಮೇ.7ರಂದು ಪುತ್ತೂರು ಇನ್‌ಸ್ಪೈರ್ ಲರ್ನಿಂಗ್ ಸೆಂಟರ್‌ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾದ ತುಂಬೆ ಬಿ.ಎ. ಐಟಿಐ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್. ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಕಾರ್ಯಾಗಾರ ನಡೆಸಿಕೊಟ್ಟ ಅವರು ಐಟಿಐ ಎಂಬುದು ಬಡವರಿಗಾಗಿ ಇರುವ ಕೋರ್ಸ್ ಎಂಬ ಮಾತು ಇದೆ. ಆದರೆ ಐಟಿಐ ಹಾಗೆ ಅಲ್ಲ. 1935ರಲ್ಲಿ ನಡೆದ 2ನೇ ಮಹಾಯುದ್ದದಲ್ಲಿ ನಿರ್ಗತಿಕರಾದವರಿಗೆ ತಾಂತ್ರಿಕ ಕೆಲಸ ಕೊಡಲು ಸರಕಾರದಿಂದ ಆರಂಭಿಸಲಾಯಿತು. ತಾಂತ್ರಿಕ ಕೆಲಸಗಳಿಗೆ ತರಬೇತಿ ಕೊಡಲಾಯಿತು. 50 ವರ್ಷದ ಹಿಂದೆ ಸರಕಾರಿ ಐಟಿಐ ಪ್ರಾರಂಭವಾಯಿತು. ರಾಜ್ಯ ಸರಕಾರದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಐಟಿಐ ಆರಂಭಿಸಲಾಯಿತು. ಎಸ್‌ಎಸ್‌ಎಲ್‌ಸಿ ಮಾಡಿ ಐಟಿಐ ಮಾಡಿ ಉನ್ನತ ಉದ್ಯೋಗಕ್ಕೆ ಪದೋನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ಲೋಬಲ್ ಇನ್ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರಿಸರ್ಚ್ ಫೌಂಡೇಶನ್‌ನ ಆಶಿಶ್ ಉಪಸ್ಥಿತರಿದ್ದರು. ಸುದ್ದಿ ಮಾಹಿತಿ ವಿಭಾಗದ ಶ್ರೀವರ್ಷ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಬಿಡುಗಡೆ ಪತ್ರಿಕಾ ವಿಭಾಗದ ಚಂದ್ರಕಾಂತ್, ರಾಕೇಶ್ ಕಲ್ಲಡ್ಕ, ಸುದ್ದಿ ಶಿಕ್ಷಣ ಮಾಹಿತಿ ಕೇಂದ್ರದ ರೇಷ್ಮಾ, ಅರಿವು ಕೃಷಿ ಕೇಂದ್ರದ ಚೈತ್ರಾ, ಇನ್‌ಸ್ಪೈರ್ ಲರ್ನಿಂಗ್ ಸೆಂಟರ್‌ನ ಸಿಬ್ಬಂದಿ ಕಾವ್ಯಶ್ರೀ ಡಿ. ಸಹಕರಿಸಿದರು.