ನಿಡ್ಪಳ್ಳಿ: ಕಾಸರಗೋಡು ದೇಲಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಆ ಪ್ರಯುಕ್ತ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ವತಿಯಿಂದ ಹಸಿರು ಹೊರೆಕಾಣಿಕೆಯನ್ನು ಮೇ.7 ರಂದು ಸಮರ್ಪಿಸಲಾಯಿತು.
ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕರಾದ ನವೀನ್ ಹೆಬ್ಬಾರ್ ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಬೀಳ್ಕೋಟ್ಟರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ನಾಗೇಶ ಗೌಡ, ಕಾರ್ಯದರ್ಶಿ ಕುಮಾರ ನರಸಿಂಹ ಭಟ್, ರಾಮಚಂದ್ರ ಮಣಿಯಾಣಿ, ವಸಂತ ರೈ ಮತ್ತಿತರರು ಉಪಸ್ಥಿತರಿದ್ದರು.