ಪುತ್ತೂರು: ಮುಂಡೂರು ಗ್ರಾಮದ ಬದಿಯಡ್ಕದಲ್ಲಿರುವ ಸರಕಾರಿ ಗೋಮಾಳ ಜಾಗವನ್ನು ಗೋಶಾಲೆ ಮಾಡಲು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ ಹಸ್ತಾಂತರ ಮಾಡುವಂತೆ ಕೋರಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಜಿಲ್ಲಾ ಅಧಿಕಾರಿ , ಸಹಾಯಕ ಕಮೀಷನರ್ , ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮನವಿ ನೀಡಿದರು .
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಟ್ರಸ್ಟಿನ ಕೋಶಾಧಿಕಾರಿ ಗಣೇಶ ಭಟ್ ಮಕರಂದ, ನಿರ್ದೇಶಕರಾದ ರಾಜು ಶೆಟ್ಟಿ, ಜನಾರ್ದನ ಕುರೆ ಮಜಲು, ಬಿಜೆಪಿ ಆರ್ಯಪು ಶಕ್ತಿಕೇಂದ್ರ ಅಧ್ಯಕ್ಷ ಪ್ರಜ್ವಲ್ ಘಾಟೆ, ರೂಪೇಶ್ ಪುತ್ತೂರು, ಪ್ರಕಾಶ್ ಚಿಕ್ಕಮುಡ್ನೂರು ಬಾಲಚಂದ್ರ ಸೊರಕೆ ಮನಿಷ್ ಕುಲಾಲ್ ಪುತ್ತೂರು ಹಾಗೂ ಹಲವಾರು ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.