ಪುತ್ತೂರು: ಏಳ್ಮುಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣೇಶ್ ರೇಡಿಯೋ ಹೌಸ್ ಮಾಲಕ ಪ್ರೇಮಾನಂದ (57ವ.) ಅವರು ಅನಾರೋಗ್ಯದಿಂದಾಗಿ ಮೇ.7ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರೇಮಾನಂದ ಅವರು ಪುತ್ತೂರಿನ ಮರೀಲ್ ನಿವಾಸಿಯಾಗಿದ್ದು, ಗಣೇಶ್ ರೇಡಿಯೋ ಹೌಸ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ,ಪುತ್ರಿಯನ್ನು ಅಗಲಿದ್ದಾರೆ.