ನಮ್ಮದೇ ಮನೆಯಲ್ಲಿ ನಮಗೆ ಅರಿವಿಲ್ಲದೆ ದಬ್ಬಾಳಿಕೆಯಿಂದ ಮನೆಯನ್ನು ಕಿತ್ತುಕೊಂಡು ಬಳಿಕ ನಾವು ನಿರಾಶ್ರಿತರಾದರೆ ನಮ್ಮ ಸ್ಥಿತಿ ಹೇಗಿರಬೇಡ? ಎಂದು ಆಲೋಚಿಸಿದರೆ ಬೆವತು ಹೋಗುವುದು ಖಂಡಿತಾ.
ಇದೇ ಪರಿಸ್ಥಿತಿ ಒಂದೇ ಸಮಾಜದ ಅನೇಕರಿಗೆ ತನ್ನ ಮನೆ ಬಿಡಿ, ರಾಜ್ಯವನ್ನೇ ಬಿಟ್ಟು ಬಿಕಾರಿಗಳ ಹಾಗೆ ಬಂದು ನಿರಾಶ್ರಿತರಾಗಿ ಬದುಕಿರುವುದನ್ನು ನೀವು ಅರಿತಾಗ ನಿಜಕ್ಕೂ ನೀವು ಅಮಾಯಕರಂತೆ ಬೇಸರಿಸದೆ ಇರಲಾರಿರಿ. ಇಂತಹ ಪರಿಸ್ಥಿತಿ ಬಂದದ್ದು ನಮ್ಮ ದೇಶದ ಶಿರ ಭಾಗ ಎಂದು ಕರೆಯಲ್ಪಡುವ ಪ್ರಜಾಪತಿ ಕಶ್ಯಪ ನಿರ್ಮಿತವಾದ ಎಂದು ಇತಿಹಾಸವಿರುವ ಪ್ರವಾಸಕ್ಕೆಂದೆ ಕೈ ಬೀಸಿ ಕರೆಯುವ ಕಾಶ್ಮೀರದಲ್ಲಿ. ಮೇಲಿಂದ ಸುಂದರವಾಗಿ ಕಾಣುತ್ತಿದ್ದ ಈ ಪ್ರದೇಶದಲ್ಲಿ ರಕ್ತದ ಕಲೆಗಳು ಅಂಟಿದ್ದವು ಅನ್ನುವುದು ಅನೇಕರಿಗೆ ತಿಳಿದಿಲ್ಲ. ಅದರಲ್ಲಿ ಈಗಿನ ಯುವ ಪೀಳಿಗೆಗೆ ತಿಳಿದಿರುವುದೇ ಬಳು ಕಷ್ಟ. ಅಂತವರಿಗೆಂದೆ ಕಾಶ್ಮೀರದಲ್ಲಿ ನಡೆದಿದ್ದ ಕರಾಳ ಘಟನೆಯನ್ನು ಪುಸ್ತಕದ ಮೂಲಕ ತಿಳಿಯುವ ಒಂದು ಅವಕಾಶವನ್ನು ʼಕಶೀರʼ ಎನ್ನುವ ಪುಸ್ತಕ ನಮಗಾಗಿ ತೆರೆದಿಟ್ಟಿದೆ. 2018ರಲ್ಲಿ ಸಾಹಿತ್ಯ ಭಂಡಾರ ಪ್ರಕಾಶನದಿಂದ ಮೂಡಿ ಬಂದ ಈ ಪುಸ್ತಕ ಕಾಶ್ಮೀರ ದುರಂತದ ಕೈಪಿಡಿಯಾಗಿ ನಿಂತಿದೆ.
ಕಾಶ್ಮೀರ ಪ್ರವಾಸದ ಕುರಿತು, ಅಲ್ಲಿಯ ಸೌಂದರ್ಯದ ಕುರಿತು ಅನೇಕ ಪುಸ್ತಕಗಳು, ದೃಶ್ಯಗಳು ನಮಗೆ ಚಿತ್ರಗಳಲ್ಲಿಯೋ, ಮಾಧ್ಯಮಗಳಲ್ಲಿಯೋ ಕಾಣ ಸಿಗುತ್ತದೆ.ಅಲ್ಲಿಯ ಕರಾಳತೆಯ ಚಿತ್ರಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಜನರನ್ನು ತಲುಪುತ್ತಿದೆ. ಅದರಲ್ಲೂ ಕನ್ನಡದಲ್ಲಿ ಅಲ್ಲಿಯ ಪರಿಸ್ಥಿತಿಯ ಬಗ್ಗೆ ಇದ್ದ ಮಾಹಿತಿಗಳು ಅತಿ ವಿರಳ. ಪ್ರತಿಯೊಬ್ಬ ಕನ್ನಡಿಗರಿಗೆ ತನ್ನ ಶಿರ ಪ್ರದೇಶ ಕಾಶ್ಮೀರದ ಕುರಿತು ಅಲ್ಲಿ ನಡೆದ ದುರ್ಘಟನೆಯ ಕುರಿತು ಅರಿಯವಂತಾಗಲು ಕೊನೆಗೆ ಸಮಯ ಬಂದೇ ಬಿಟ್ಟಿತು. ಅದಕ್ಕೆ ಪುಸ್ತಕದ ಮಾರ್ಗ ತೋರಿಸಿದವರು ಕನ್ನಡತಿ ʼಸಹನಾ ವಿಜಯ್ ಕುಮಾರ್ʼ ಎನ್ನುವ ಗಟ್ಟಿಗಿತ್ತಿ ಮಹಿಳಾ ಬರಹಗಾರ್ತಿ.
ಕಾಶ್ಮೀರ ಪಂಡಿತರ ಹತ್ಯೆಯ ಮುಂಚೆ ಕಾಶ್ಮೀರಿ ಯುವಕರ ಮನಸ್ಥಿತಿ,ಅಲ್ಲಿದ್ದ ಪ್ರತ್ಯೇಕತವಾದ, ನಮ್ಮ ರಾಜಕಾರಣಿಗಳು ಆಗ ತೋರಿಸಿದ ಧೋರಣೆ, ಹತ್ಯೆ, ಧಾರುಣ ದುರ್ಘಟನೆಗಳನ್ನು ಸಂಗತಿ ಇವೆಲ್ಲ ತಮ್ಮ ನೆಲದಲ್ಲಿ ನಿರಾಶ್ರಿತರಾದ ಮೂಲನಿವಾಸಿಗಳ ಕಥೆ ಇದು.ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾದ ಸಮಾಜದ ಚಿತ್ರಣವನ್ನು ವಿವರಿಸುವ ಓದುಗರಿಗೆ ಅತ್ಯಂತ ವಿಷಾಧನೀಯ ಎನ್ನುವ ಅಕ್ಷರಗಳನ್ನು ಹೊಂದಿರುವ ನೈಜತೆಯ ಆಧಾರದ ಪುಸ್ತಕ ಇದಾಗಿದೆ.
ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ಬೇಸರ, ಆವೇಷ, ಭವಿಷ್ಯ, ಎಲ್ಲವೂ ಆವರಿಸಿಕೊಂಡು ನಾವು ಮೌನವಾಗುತ್ತ ಹೋಗುವುದರಲ್ಲಿ ಸಂಶಯವಿಲ್ಲ.ಪುಸ್ತಕದ ಕುರಿತು ಕುತೂಹಲವಿದ್ದರೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪುಸ್ತಕ ಪಡೆದು ಅಂದದ ಕಾಶ್ಮೀರದ ರಕ್ತದ ಕಲೆಗಳನ್ನು ತೆರೆದುನೋಡಿ👇👇
https://shorturl.at/61hAm
https://pustakamane.com/product/kasheera/ (contact : +91 96064 74289 )