ಆಲಂಕಾರು: ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳು ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಹಿನ್ನಲೆಯಲ್ಲಿ ಭಾರತೀಯ ಸೈನ್ಯ ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಭಯೋತ್ಪಾದಕರನ್ನು ದಮನಗೊಳಿಸಿ ದೇಶದ ಶಾಂತಿ ಕಾಪಾಡಲು ಮುಂದಾದ ಹೆಮ್ಮೆಯ ಭಾರತ ದೇಶದ ಸೈನಿಕರಿಗೆ ಶಕ್ತಿ ತುಂಬಲು ಮತ್ತು ಅವರ ಶ್ರೇಯಸ್ಸಿಗಾಗಿ ಮಸ್ಜಿದುಲ್ ಬಾರಿ ಜುಮ್ಮಾ ಮಸೀದಿ ನೆಕ್ಕರೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನೆಕ್ಕರೆ ಜಮ್ಮಾ ಮಸೀದಿಯ ಧರ್ಮಗುರುಗಳಾದ ಫಯಾಝ್ ಫೈಝಿ ಮತ್ತು ಅಸ್ಲಮಿ ಉಸ್ತಾದ್ ರವರ ನೇತೃತ್ವದಲ್ಲಿ ಪ್ರಾರ್ಥನೆ ನೇರವೆರಿಸಿದರು.
ಈ ಸಂದರ್ಭದಲ್ಲಿ ಜಮಾತ್ ಅದ್ಯಕ್ಷರಾದ ಮೊಹಮ್ಮದ್ ಯಾನೆ ಚೆರೆಮೋನು, ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಎನ್.ಎಂ ,ಎಂ.ಎ ಅಬ್ದುಲ್ಲ ಕುಂಞ ಆಲಂಕಾರು, ಗೌರವ ಅಧ್ಯಕ್ಷರಾದ ಅಬ್ದುಲ್ಲ ಹಾಜಿ ನೆಕ್ಕರೆ, ಹಿರಿಯರಾದ ಅಬ್ದುಲ್ಲಾ ಹಾಜಿ ಮೆಹಬೂಬ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ಎಸ್, ಕೆ.ಎಫ್.ವೈ,ಎಮ್., ಸ್ಥಾಪಕ ಅಧ್ಯಕ್ಷರಾದ ರಹಿಮಾನ್ ಆರ್, ಆರ್ ರಫೀಕ್ ರಿಝ್ವಿ, ಜಮಾತ್ ಸದಸ್ಯರಾದ ಮಹಮ್ಮದ್ ತಾಜ್,ಬಶೀರ್ ತಾಜ್,ಎಸ್.ಎಂ ಅದ್ದು, ಕೆ.ಎಸ್ ಇಬ್ರಾಹಿಂ, ಗೋವಾ ಮಹಮ್ಮದ್, ಫೌಶೀಲ್,ಸವಾದ್ ಎನ್.ಎಂ,
ಮತ್ತು ಯಂಗ್ ಮೆನ್ಸ್ ಸದಸ್ಯರು ಮತ್ತು ಜಮಾತ್ ಸದಸ್ಯರು ಉಪಸ್ಥಿತರಿದ್ದರು.