ಉಪ್ಪಿನಂಗಡಿ: ಭಾರತೀಯ ಯೋಧರಿಗೆ ಮತ್ತು ಆಡಳಿತಗಾರರಿಗೆ ರಕ್ಷಾ ಕವಚವಾಗಿ ಹಾಗೂ ಇವರಿಗೆ ಪ್ರತಿ ಯತ್ನದಲ್ಲೂ ಯಶಸ್ಸನ್ನು ದಯಪಾಲಿಸಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸಿ ಉಪ್ಪಿನಂಗಡಿಯ ವನಭೋಜನದಲ್ಲಿ ನೆಲೆ ನಿಂತ ಶ್ರೀ ಆಂಜನೇಯ ಸ್ವಾಮಿಗೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಿಂಧೂರ ಪೂಜೆಯನ್ನು ಶನಿವಾರದಂದು ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಮಾಜಿ ಶಾಸಕ ಸಂಜೀವ ಮಠಂದೂರು, ಸಂಘದ ನಿರ್ದೇಶಕರಾದ ಸಂಧ್ಯಾ , ಗೀತಾ, ಸದಾನಂದ ಶೆಟ್ಟಿ, ರಾಘವ ನಾಯ್ಕ, ಶ್ರೀರಾಮ ಭಟ್ ಪಾತಾಳ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ ಪಿ ಎನ್, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ತಾಳ್ತಜೆ, ಕೆ.ವಿ. ಪ್ರಸಾದ್, ಮಾಜಿ ನಿರ್ದೇಶಕರಾದ, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಧರ್ನಪ್ಪ ನಾಯ್ಕ, ತಾ.ಪಂ. ಮಾಜಿ ಸದಸ್ಯರಾದ ಎನ್ ಉಮೇಶ್ ಶೆಣೈ, ಮುಕುಂದ ಗೌಡ ಬಜತ್ತೂರು, ಪ್ರಮುಖರಾದ ವಿದ್ಯಾಧರ ಜೈನ್, ಕೃಷ್ಣ ಶೆಣೈ, ಹರಿರಾಮಚಂದ್ರ, ರಾಜಗೋಪಾಲ ಭಟ್ ಕೈಲಾರು, ವಸಂತ ಗೌಡ ಪಿಜಕ್ಕಳ, ಪ್ರಸಾದ್ ಬಂಡಾರಿ, ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ ಶೋಭಾ, ಸಿಬ್ಬಂದಿ ಪುಷ್ಪರಾಜ ಶೆಟ್ಟಿ , ಪ್ರವೀಣ ಆಳ್ವ, ರವೀಶ್ ಎಚ್. ಟಿ, ದೇವರಾಜ್, ಶಶಿಧರ್ ಹೆಗ್ಡೆ, ಮಹೇಶ್, ಚಂದ್ರಹಾಸ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ದೇವಾಲಯದ ಅರ್ಚಕ ಸಂದೀಪ್ ಭಟ್ ಸಿಂಧೂರ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.