ಪುತ್ತೂರು: ಭಾರತವು ಪಾಕಿಸ್ಥಾನದ ವಿರುದ್ಧ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಲು ಹಾಗೂ ಯೋಧರ ಸುಕ್ಷೇಮಕ್ಕಾಗಿ ಮೇ.11 ರಂದು ಬೆಳಿಗ್ಗೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ,ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅರ್ಚಕರಾದ ಯೋಗೀಶ ಕುಂಜಾತ್ತಾಯ ಹಾಗೂ ರಮೇಶ್ ಭಟ್ ಇವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗು ಪ್ರಾರ್ಥನೆ ನೆರವೇರಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ಲಲಿತಾ ಕೆ, ರೇಖಾ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ್ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್ ಹಾಗೂ ಸಿಬ್ಬಂದಿ ಭರತ್, ರಘುನಾಥ್ ಪೂಜಾರಿ ಸಹಿತ ಭಕ್ತಾಧಿಗಳು ಪಾಲ್ಗೊಂಡಿದ್ದರು.