ಮೇ.13: ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ

0

ಪುತ್ತೂರು: ಮುಳಿಯದ ಹೊಸ ವಿನೂತನ ಶೋ ರೂಮ್ ಉದ್ಘಾಟನಾ ಸಮಾರಂಭದ ಅಂಗವಾಗಿ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಇವರಿಂದ ಮೇ.13ರಂದು ಸಂಜೆ 6.30ಕ್ಕೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬೊಂಬೆಯಾಟ ನಡೆಯಲಿದೆ.

ಗೊಂಬೆಯಾಟ ಅತೀ ಪುರಾತನ ಜಾನಪದ ಕಲೆಯಾಗಿದೆ. ನೂರು ವರ್ಷಗಳ ಹಿಂದೆ ನಮ್ಮ ಕರಾವಳಿಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಬೊಂಬೆಯಾಟ ತಂಡಗಳಿದ್ದುವು. ಆದರೆ ಆಧುನಿಕ ಮಾಧ್ಯಮಗಳ ಹಾವಳಿಯಿಂದ ಈ ಜಾನಪದ ಕಲೆಯೂ ಅವನತಿಯ ಅಂಚಿನತ್ತ ಧಾವಿಸುತ್ತಿದೆ. ಇಂದು ಕೇವಲ ಎರಡು ತಂಡಗಳು ಮಾತ್ರ ಜೀವಂತವಾಗಿದೆ.

ಪುತ್ತೂರು ಬಾಚನನ್ನು ಕಾಸರಗೋಡಿನ ಬೊಂಬೆಯಾಟದ ಜನಕನೆಂದು ಗುರುತಿಸುತ್ತಾರೆ. ಅವನು ಕೆತ್ತಿದ ಬೊಂಬೆಗಳು ಇಂದೂ ಕಾಸರಗೋಡಿನ ಬೆದ್ರಡ್ಕದಲ್ಲಿದೆ. ಹೀಗೆ ಸಂಪೂರ್ಣವಾಗಿ ನಾಶವಾಗಿದ್ದ ಬೊಂಬೆಯಾಟ ಕಲೆಗೆ 1981ರಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಮೂಲಕ ಪುನಶ್ವೇತನ ನೀಡಲಾಯಿತು. ಯಕ್ಷಗಾನ ವಾಲ್ಮೀಕಿ ಕುಂಬಳೆ ಪಾರ್ತಿಸುಬ್ಬನ ವಂಶಜರಾದ ಕೆ. ಲಕ್ಷ್ಮೀನಾರಾಯಣಯ್ಯ ವಿದ್ವಾನ್ ಹಾಗೂ ಕೆ. ವೆಂಕಟಕೃಷ್ಣಯ್ಯನವರಿಂದ ಸ್ಥಾಪಿಸಲ್ಪಟ್ಟ ಈ ತಂಡವು ಪ್ರಪಂಚದ ಏಕೈಕ ತೆಂಕುತಿಟ್ಟು ಶೈಲಿಯ ಬೊಂಬೆಯಾಟ ತಂಡವಾಗಿದೆ.” ಈ ಜಾನಪದ ಬೊಂಬೆಯಾಟವನ್ನು ಪ್ರೋತ್ಸಾಹಿಸುವ ನೀತಿಯಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಕೃಷ್ಣನಾರಾಯಣ ಮುಳಿಯ. ಈ ಬೊಂಬೆಯಾಟದ
ಪ್ರಸಂಗ ಶ್ರೀ ದೇವಿ ಮಹಾತ್ಮೆ ಆಗಿದ್ದು ಇದನ್ನು ಯಕ್ಷಗಾನ ಪ್ರಿಯರು ವಿಶೇಷವಾಗಿ ಮಕ್ಕಳನ್ನು ಕರೆದುಕೊಂಡು ಬಂದು ತಾಯಂದಿರು ಕಾರ್ಯಕ್ರಮವನ್ನು ವೀಕ್ಷಿಸುವುದು ಅಗತ್ಯ ಎಂದು ಅವರು ಹೇಳಿದರು. ಈ ಪ್ರಸಂಗವನ್ನು ರಮೇಶ ಕೆ. ವಿ. ಇವರು ನಿರ್ದೇಶಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here