ಕಾವು: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಹಿಂದು ಪ್ರವಾಸಿಗರ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾ ಯೋಧರಿಗೆ ಇನ್ನಷ್ಟು ಶಕ್ತಿಯನ್ನು ಅನುಗ್ರಹಿಸಲಿ ಮತ್ತು ನಮ್ಮ ದೇಶಕ್ಕೆ ಹಾಗೂ ಯೋಧರಿಗೆ ಜಯ ಸಿಗಲಿ ಎಂದು ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಭಜನೆ ಹಾಗೂ ವಿಶೇಷ ಪ್ರಾರ್ಥನೆಯು ಮೇ.11ರಂದು ಸಂಜೆ ನಡೆಯಿತು.
ಸಂಜೆ ಶ್ರೀದೇವಳದಲ್ಲಿ ಸಾಮೂಹಿಕ ಭಜನೆ ನಡೆಸಿ ಬಳಿಕ ಶ್ರೀದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯರವರು ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ವಿಕಾಸ್ ಕಡಮಣ್ಣಾಯರವರು ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಚಂದ್ರಶೇಖರ ರಾವ್ ನಿಧಿಮುಂಡ, ಬಿಜೆಪಿ ನೆ.ಮುಡ್ನೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ನಾರಾಯಣ ಆಚಾರ್ಯ ಮಳಿ, ಬಿಜೆಪಿ ಮಹಿಳಾ ಮೋರ್ಛಾದ ಚಿತ್ರಲೇಖಾ ರೈ, ಬಿಜೆಪಿ ನನ್ಯ ಬೂತ್ ಅಧ್ಯಕ್ಷ ನವೀನ ನನ್ಯಪಟ್ಟಾಜೆ, ಪಕ್ಷದ ಪ್ರಮುಖರಾದ ಶರತ್ ಕುಮಾರ್ ರೈ ಕಾವು, ಸಂಕಪ್ಪ ಪೂಜಾರಿ ಚಾಕೋಟೆ, ಹರೀಶ್ ಕುಂಜತ್ತಾಯ, ಯೋಗೀಶ್ ಕಾವು, ಪ್ರಸಾದ್ ರೈ ಅಂಕೊತ್ತಿಮಾರು, ಕುಂಞ ಅಮ್ಚಿನಡ್ಕ, ಸುನೀಲ್ ನಿಧಿಮುಂಡ, ಅನೀಶ್ ಕೊಚ್ಚಿ, ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಅಮ್ಮು ಪೂಂಜ ಪಳನೀರು, ವಿಠಲ ಗೌಡ ಕಟ್ಟಪುಣಿ, ಸುಂದರ ಪೂಜಾರಿ ಕೆರೆಮಾರು, ಸೀತಾರಾಮ ಗೌಡ ಕೊಂಕಣಿಗುಂಡಿ, ಚಂದ್ರಶೇಖರ ಕೆ.ಸಿ ಹೊಸಮನೆ, ಶೇಷಪ್ಪ ಗೌಡ ಪರನೀರು, ಪವನ್ ಅಮ್ಚಿನಡ್ಕ, ಪ್ರಜ್ವಲ್ ಕೆರೆಮಾರು, ಚಂದ್ರಶೇಖರ ಮಾಣಿಯಡ್ಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.