ಹಿರೇಬಂಡಾಡಿ: ನವೀಕರಣಗೊಂಡಿರುವ ಹಿರೇಬಂಡಾಡಿ ಗ್ರಾಮದ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದ ಪ್ರತಿಷ್ಠಾ ಕಲಶಾಭಿಷೇಕ ಮೇ.19ರಿಂದ 21ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ ಹಾಗೂ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಹಿರೆಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಶಾಂತಿತ್ತಡ್ಡ, ಸದಸ್ಯರಾದ ಗಣೇಶ್ ಮಠಂದೂರು, ಗ್ರಾಮಸ್ಥರಾದ ದಿವಾಕರ ಹಳೆಮನೆ, ಜಗದೀಶ ಹಂಚಿನಮನೆ, ಸತೀಶ ವಳಕಡಮ, ಪ್ರವೀಣ ನೆಹರುತೋಟ, ಪ್ರಶಾಂತ ಕರೆಂಕಿ, ಆನಂದ ನೆಹರುತೋಟ, ಚೇತನ್ ನೆಹರುತೋಟ, ವಿನೋದ್ ಬೊಂಟ್ರಪಾಲ್, ಆದಿರಾಜ ಶಾಂತಿತ್ತಡ್ಡ, ಹೊನ್ನಪ್ಪ ಖಂಡಿಗೆ, ವಿನಯ ಪಟ್ಟೆ, ನವೀನ್ ನೆಹರುತೋಟ, ನಾಗರಾಜ ಸಿಂಕ್ರಕೊಡಂಗೆ, ಜನಾರ್ದನ ಕನ್ಯಾನ, ಹರಿಶ್ಚಂದ್ರ ಮಾಳ, ನಿತಿನ್ ತಾರಿತ್ತಡಿ ಮತ್ತಿತರರು ಉಪಸ್ಥಿತರಿದ್ದರು.
