ಅಳಕ್ಕೆ ತರವಾಡು ಮನೆಯ ಗೃಹಪ್ರವೇಶ, ಧರ್ಮ ದೈವ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಕಲಶ, ನೇಮೋತ್ಸವ

0

ಪುತ್ತೂರು: ಶತಮಾನಗಳ ಇತಿಹಾಸ ಇರುವ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಅಳಕ್ಕೆ ಎಂಬಲ್ಲಿ ಕುಟುಂಬಸ್ಥರು ಸೇರಿ ನೂತನವಾಗಿ ನಿರ್ಮಿಸಿರುವ ತರವಾಡು ಮನೆಯ ಗೃಹ ಪ್ರವೇಶ, ಧರ್ಮ ದೈವ ಧೂಮಾವತಿ ಬಂಟ ಹಾಗೂ ಕಲ್ಲುರ್ಟಿ, ಕುಪ್ಪೆಪಂಜುರ್ಲಿ, ವರ್ಣರ ಪಂಜುರ್ಲಿ ಹಾಗೂ ಗುಳಿಗ ದೈವ ಸೇರಿದ ಪರಿವಾರ ದೈವಗಳ ನೇಮೋತ್ಸವ, ವೇ. ಮೂ. ಬ್ರಹ್ಮ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇ. ಮೂ. ಕರಿಯಡ್ಕ ಬಾಲಚಂದ್ರ ಭಟ್ ಇವರ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನೆ, ವಾಸ್ತುಹೋಮ, ಮಹಾಗಣಪತಿ ಹೋಮ, ಕಲಶಪೂಜೆ, ದೇವ ಪ್ರತಿಷ್ಠೆ, ಶ್ರೀ ಸತ್ಯನಾರಾಯಣ ಪೂಜೆ, ಸ್ಥಳದ ರಕ್ತೇಶ್ವರಿ ಮತ್ತು ಪರಿವಾರ ದೈವಗಳಿಗೆ ತಂಬಿಲ, ಮುಡಿಪು ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಮೇ. 10ರಿಂದ ಮೇ. 12ರ ತನಕ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ಕುಟುಂಬಸ್ಥರು ಬಂಧುಗಳು ಹಾಗೂ ಭಕ್ತರು ಪಾಲ್ಗೊಂಡು ಶ್ರೀ ದೈವದೇವರ ನರ್ತನ ಸೇವೆ ಹಾಗೂ ಗಂಧಪ್ರಸಾದ ಸ್ವೀಕರಿಸುವುದರೊಂದಿಗೆ ಅನ್ನಸಂತರ್ಪಣೆಯಲ್ಲೂ ಪಾಲ್ಗೊಂಡರು. ಕುಟುಂಬದ ಯಜಮಾನರು ಬಂಬಿಲ ಬರಮೇಲು ರಾಮಣ್ಣ ರೈ, ಅಳಕೆ ಕೋಚಣ್ಣ ರೈ ಹಾಗೂ ಕುಟುಂಬಸ್ಥರು ಬಂಟ ಬಂಗೇರ ಅಳಕ್ಕೆ ತರವಾಡು ಮನೆಯಪರವಾಗಿ ಎಲ್ಲರನ್ನೂ ಸ್ವಾಗತಿಸಿ ಉಟೋಪಚಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು ದೈವಗಳ ಮಧ್ಯಸ್ಥರಾಗಿ ನೇಮೋತ್ಸವವನ್ನು ನಡೆಸಿ ಕೊಟ್ಟರು.

LEAVE A REPLY

Please enter your comment!
Please enter your name here