ʼಸುಹಾಸ್‌ ಹತ್ಯೆ ಪ್ರಕರಣದಲ್ಲಿ ಸರಕಾರ, ಇಲಾಖೆಯಿಂದ ನಮ್ಮ ಕಡೆಗಣನೆʼ : ಉಪ್ಪಿನಂಗಡಿಯಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಸುಹಾಸ್‌ ಶೆಟ್ಟಿ ಮಾವನ ಆರೋಪ

0

ಉಪ್ಪಿನಂಗಡಿ : ಹುಟ್ಟು ಕಾಂಗ್ರೇಸಿಗರಾದರೂ ಹಿಂದೂ ಎಂಬ ಕಾರಣಕ್ಕೆ ಮತಾಂಧರ ಒತ್ತಾಯಕ್ಕೆ ಮಣಿದು ಸರಕಾರ ಮತ್ತು ಇಲಾಖೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಮ್ಮನ್ನು ಕಡೆಗಣಿಸಿರುವುದು ಮನಸ್ಸಿಗೆ ತುಂಬಾ ದುಃಖ ತಂದಿದೆ. ಆಡಳಿತ ವ್ಯವಸ್ಥೆಯ ಈ ನಡೆ ಸಮಸ್ತ ಹಿಂದೂಗಳನ್ನು ಆತ್ಮಾವಲೋಕನ ಮಾಡುವಂತೆ ಮಾಡಿದೆ ಎಂದು ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಮಾವ ರಾಜೇಶ್ ಶೆಟ್ಟಿ ಹೇಳಿದರು.ಅವರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಪರೋಪಕಾರಿ ಮನೋಗುಣದ ಸುಹಾಸ್ ಶೆಟ್ಟಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ತನ್ನ ಭೂಮಿಯ ಮೇಲೆ ಸಾಲ ಮಾಡಿ ವಾಹನ ಖರೀದಿಸಿದ್ದ. ಮೂಲತಃ ನಾವೆಲ್ಲರೂ ಕಾಂಗ್ರೇಸ್ ಪಕ್ಷದವರಾಗಿದ್ದು, ರಮಾನಾಥ ರೈ ರವರ ಚುನಾವಣೆಯ ಸಂದರ್ಭದಲ್ಲಿ ದುಡಿದವರಾಗಿದ್ದೇವೆ. ಮುಸ್ಲಿಂ ತಂಡದೊಂದಿಗೆ ನಡೆದ ಗಲಾಟೆಯನ್ನು ಮುಂದಿರಿಸಿ ಆತನ ಉದ್ಯೋಗ ಕಳೆಯುವಂತಾದಾಗ , ಮತೀಯ ಕಾರಣಕ್ಕೆ ತನ್ನ ಉದ್ಯೋಗವನ್ನು ಕಸಿದ ಸಮುದಾಯದ ಮೇಲೆ ಆತ ಆಕ್ರೋಶಗೊಂಡು ಹಿಂದೂ ಧರ್ಮ ರಕ್ಷಣೆಗೆ ಬದುಕು ಮೀಸಲಿರಿಸುವ ಪ್ರತಿಜ್ಞೆ ಕೈಗೊಂಡ. ತಾಯಿ ಸಂಘರ್ಷದ ಬದುಕು ಬೇಡವೆಂದರೂ , “ಅಮ್ಮ ದುಷ್ಠರಿಗೆ ಬೆದರಿ ನೂರು ದಿನ ಬದುಕುವುದಕ್ಕಿಂತ ದುಷ್ಠರನ್ನು ಎದುರಿಸಿ ಹುಲಿಯಂತೆ ಮೂರು ದಿನ ಬದುಕಿದರೂ ನನಗೆ ಸಾಕು” ಎಂದಿದ್ದ. ಅಂತೆಯೇ ದುಷ್ಠ ಕೂಟದ ಅಮಾನುಷ ದಾಳಿಗೆ ಸಿಲುಕಿ ಸಾವನ್ನಪ್ಪಿದ ಎಂದವರು ತಿಳಿಸಿದರು.

ಸರಕಾರದವರು ಬರಲಿಲ್ಲ, ಪೊಲೀಸರೂ ಬರಲಿಲ್ಲ:
ಮೃತ ಸುಹಾಸ್ ಶೆಟ್ಟಿ ಮನೆಗೆ ರಾಜ್ಯ ಕಾಂಗ್ರೆಸ್ ಸರಕಾರದ ಯಾವೊಬ್ಬ ರಾಜಕಾರಣಿಗಳೂ ಬರಲಿಲ್ಲ. ಪೊಲೀಸರೂ ಕೂಡಾ ಬರಲಿಲ್ಲ. ಎನ್ನುವುದೇ ನನ್ನನ್ನು ಕಳವಳಕ್ಕೆ ಒಳಪಡಿಸಿದೆ. ಮೃತನ ಹತ್ಯೆಗೆ ಸಂಬಂಧಿಸಿ ಆತನ ಹೆತ್ತವರಿಂದ ಹೇಳಿಕೆ ಪಡೆಯುವುದಾಗಲಿ, ಸಾಂತ್ವಾನ , ಧೈರ್ಯತುಂಬುವ ಕಾರ್ಯವನ್ನಾಗಲಿ ಮಾಡುವ ಸಲುವಾಗಿಯಾದರೂ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಈ ತನಕ ಸುಹಾಸ್ ಶೆಟ್ಟಿಯ ಮನೆಗೆ ಭೇಟಿ ನೀಡದಿರುವುದು ಸರಕಾರಿ ವ್ಯವಸ್ಥೆಯ ಬಗ್ಗೆ ನಮಗೆಲ್ಲಾ ಭ್ರಮನಿರಸನ ಮೂಡಿಸಿದೆ. ಜಿಲ್ಲೆಗೆ ಆಗಮಿಸಿದ ಮಂತ್ರಿ ಮುಖಂಡರಿಗೆ ಮತಾಂಧರು ಬೆದರಿಕೆಯೊಡ್ಡಿದ್ದಾರೆಂದು ನಮ್ಮ ಮನೆಗೆ ಭೇಟಿ ನೀಡಲಾಗಲಿಲ್ಲ. ಈ ಎಲ್ಲಾ ವಿದ್ಯಾಮಾನಗಳಿಂದ ಮುಂಬರುವ ದಿನಗಳು ಹಿಂದೂ ಸಮಾಜಕ್ಕೆ ಅಪಾಯಕಾರಿಯಾದ ದಿನಗಳಾಗಿದ್ದು, ಸಮಾಜದ ಮಂದಿ ಆತ್ಮರಕ್ಷಣೆಯತ್ತ ಗಮನಹರಿಸಬೇಕಾಗಿದೆ ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಂದಾಳು ಅರುಣ್ ಕುಮಾರ್ ಪುತ್ತಿಲ ಶ್ರದ್ದಾಂಜಲಿ ನುಡಿಗಳನ್ನಾಡಿದರು.
ಸಭೆಯಲ್ಲಿ ಪ್ರಮುಖರಾದ ಕರುಣಾಕರ ಸುವರ್ಣ, ಸುದರ್ಶನ್ , ಸುನಿಲ್ ಕುಮಾರ್ ದಡ್ಡು, ಸುನಿಲ್ ಅನಾವು, ರವೀಂದ್ರ ಆಚಾರ್ಯ, ಜಯರಾಮ ಇಳಂತಿಲ, ಅನಿಲ್ ಹಿರೆಬಂಡಾಡಿ, ಪ್ರಸಾದ್ ಬಂಡಾರಿ, ಸಂತೋಷ್ ಅಡೆಕ್ಕಲ್, ಪ್ರಶಾಂತ್ ಶಿವಾಜಿನಗರ , ಹರೀಶ್ ನಾಯಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸಾದ್ ಪಚ್ಚಾಡಿ, ರವಿನಂದನ್ ಹೆಗ್ಡೆ, ರಾಧಾಕೃಷ್ಣ ನಾಯ್ಕ್, ಅನುರಾಧ ಆರ್ ಶೆಟ್ಟಿ, ಗುಣಕರ ಅಗ್ನಾಡಿ, ರಾಜಶೇಖರ್ ಶೆಟ್ಟಿ ಕರಾಯ, ಸಂದೀಪ್ ಕುಪ್ಪೆಟ್ಟಿ, ಮೊದಲಾದವರು ಭಾಗವಹಿಸಿದ್ದರು.
ಸಭೆಯ ಬಳಿಕ ಪಿಂಡ ಪ್ರದಾನಾದಿ ಕಾರ್ಯಗಳನ್ನು ಮುಗಿಸಿದ ಸುಹಾಸ್ ಶೆಟ್ಟಿ ಹೆತ್ತವರಿಗೆ ಶ್ರೀ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಲಾಯಿತು.

LEAVE A REPLY

Please enter your comment!
Please enter your name here