ಪುತ್ತೂರು: ಇತ್ತೀಚೆಗೆ ನಿಧನರಾದ ಪಡೀಲು ಎಸ್.ಆರ್ ಹಾರ್ಡ್‌ವೇರ್‌ನ ಮ್ಹಾಲಕ, ಬನ್ನೂರು ನಿವಾಸಿ ಸೀತಾರಾಮ ಗೌಡರವರಿಗೆ ಶ್ರದ್ಧಾಂಜಲಿ ಸಭೆಯು ಮೇ.5ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ನುಡಿ ನಮನ ಸಲ್ಲಿಸಿದ ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ ನಾರಾಯಣ ಮಾತನಾಡಿ, ಸೀತಾರಾಮ ಗೌಡವರು ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದಾರೆ. ಸಾಧಿಸುವ ಛಲದಿಂದ ಉತ್ತಮ ಗುರಿ ಸಾಧಿಸಿದವರು, ಧೈರ್ಯವಂತರಾಗಿದ್ದರು. ಶಾಲಾ ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಸಾಧನೆ ಮಾಡಿದವರು. ಶಿಕ್ಷಣವಾಗಿಯೂ ಜೀವನದಲ್ಲಿ ಸಾಧನೆ ಮಾಡಿದ್ದ ಅವರು ಉದ್ಯಮ ಹಾಗೂ ಜೀವನದಲ್ಲಿ ಶೇ.100 ಶ್ರೇಯಸ್ಸು ಪಡೆದವರು ಎಂದರು.
ಪಡೀಲು ಬಾಳಪ್ಪ ಕಾಂಪ್ಲೆಕ್ಸ್‌ನ ಮ್ಹಾಲಕ ಬಾಳಪ್ಪ ಪೂಜಾರಿ, ಮೃತರ ಮನೆಯವರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.