ಪುತ್ತೂರು: ಶಿವಳ್ಳಿ ಸಂಪದ ಬೆಳಂದೂರು ವಲಯದ ವೈದೀಕರ ನೇತೃತ್ವದಲ್ಲಿ ’ಐಕ್ಯಮತ್ಯ ಸೂಕ್ತ ಹೋಮ’ವು ಕಾಣಿಯೂರು ಮಠದಲ್ಲಿ ಮೇ.12ರಂದು ನಡೆಯಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಶಿವಳ್ಳಿ ಸಂಪದ ಇದರ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ, ವೇದಲಕ್ಷ್ಮಿಕಾಂತ ಆಚಾರ್ಯ, ಮಂಗಳೂರು ಅಧ್ಯಕ್ಷ ದಯಾಕರ, ಬೆಳಂದೂರು ಅಧ್ಯಕ್ಷ ಚಿದಾನಂದ ಉಪಾಧ್ಯಾಯ, ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್, ಗೌರವಾಧ್ಯಕ್ಷೆ ವತ್ಸಲಾರಾಜ್ಞಿ ಹಾಗೂ ಕಾರ್ಯದರ್ಶಿ ವೀಣಾ ಕೊಳತ್ತಾಯರು ಉಪಸ್ಥಿತರಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಿಂತಕ ಲಕ್ಷ್ಮೀಶ ತೊಳ್ಪಾಡಿ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ ವಂದಿಸಿದರು. ಉದಯಕುಮಾರ್ ಪಜಿಮಣ್ಣು ಕಾರ್ಯಕ್ರಮ ನಿರ್ವಹಿಸಿದರು. ಬೆಳಿಗ್ಗೆ ಶಿವಳ್ಳಿ ಸಂಪದ ತಾಲೂಕಿನ ಬೊಳುವಾರು, ದರ್ಬೆ, ರಾಮಕುಂಜ, ಬೆಳಂದೂರು ಕಾವು ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅಖಿಲ ಪಜಿಮಣ್ಣು ಮತ್ತು ತಂಡದವರಿಂದ ಭಕ್ತಿ ಭಾವ ಗಾನ ಕಾರ್ಯಕ್ರಮ ನಡೆಯಿತು.