ಮೇ.16: ಕೆಮ್ಮಿಂಜೆ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ 27ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ ಉದ್ಘಾಟನೆ 

0

ಪುತ್ತೂರು: ದೇವಾಲಯ ಸಂವರ್ಧನ ಸಮಿತಿ ಕರ್ನಾಟಕ, ಪುತ್ತೂರು, ದ.ಕ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ವತಿಯಿಂದ ಇಂದಿನ ಮಕ್ಕಳಿಗೆ ಹಿಂದೂ ಧರ್ಮದ ಅಮೂಲಾಗ್ರ ಪರಿಚಯ ಮಾಡಿ ಕೊಡಲು ಮೂರು ವರ್ಷಗಳಿಂದ ವ್ಯವಸ್ಥಿತ ಪಠ್ಯ ಪುಸ್ತಕದೊಂದಿಗೆ ಪ್ರಾರಂಭಿಸಿದ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ 27ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಮೇ 16 ರಂದು ಬೆಳಿಗ್ಗೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ತಿಕ್ ತಂತ್ರಿ ಕೆಮ್ಮಿಂಜೆ ಇವರು ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ವಹಿಸಿಕೊಳ್ಳಲಿರುವರು. ಮಂಗಳೂರು ವಿಭಾಗದ  ದೇವಾಲಯ ಸಂವರ್ಧನ ಸಮಿತಿ ವಿಭಾಗ ಪ್ರಮುಖ್ ಕೇಶವಪ್ರಸಾದ್ ಮುಳಿಯರವರು ಸುಜ್ಞಾನ ದೀಪಿಕೆ ಪುಸ್ತಕ ವಿತರಣೆಯನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮ ಶಿಕ್ಷಣ ಸಮಿತಿ ಪುತ್ತೂರು ತಾಲೂಕಿನ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಗೌರವ ಉಪಸ್ಥಿತಿಯಾಗಿ ಹಿಂದೂ ಧಾರ್ಮಿಕ ಶಿಕ್ಷಣ ವಿಭಾಗದ ಸಂಯೋಜಕಿ ಶ್ರೀಮತಿ ಶಂಕರಿ ಶರ್ಮ, ಹಿಂದೂ ಧಾರ್ಮಿಕ ಶಿಕ್ಷಣ ವಿಭಾಗದ ಬೋಧಕ ಸಂಯೋಜಕಿ ಶ್ರೀಮತಿ ಪ್ರಭಾವತಿರವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ನಿರ್ವಾಹಕರಾದ ಶ್ರೀಮತಿ ವೀಣಾ ನಾಗೇಶ ತಂತ್ರಿ, ಸಂಘಟಕರಾದ ಶ್ರೀಮತಿ ತೇಜಸ್ವಿ ರಾಜೇಶ್ ಕೆಮ್ಮಿಂಜೆ ಹಾಗೂ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಪೋಷಕರ ಬಳಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here