ಪುತ್ತೂರು: ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು ಇದರ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕುಂಬ್ರ ಮೆಸ್ಕಾಂ ವತಿಯಿಂದ ವಿದ್ಯುತ್ ತಂತಿಗಳಿಗೆ ಅಪಾಯ ತರಬಲ್ಲ ಮರದ ಗೆಲ್ಲು ತೆರವು ಕಾರ್ಯಾಚರಣೆ ಮೇ.16ರಂದು ನಡೆಯಿತು. ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ರವೀಂದ್ರರವರ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ತಂತಿಗಳಿಗೆ ಅಪಾಯ ತರಬಲ್ಲ ಮರದ ಗೆಲ್ಲುಗಳನ್ನು ತೆರವು ಮಾಡಲಾಯಿತು. ಕುಂಬ್ರದಿಂದ ಮಾಡಾವು ಲೈನ್ಗಳಲ್ಲಿ ಹಾಗೇ ಕುಂಬ್ರದಿಂದ ಕಾವು ಲೈನ್ಗಳಲ್ಲಿ ಏಕಕಾಲದಲ್ಲಿ ಎರಡು ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಬೃಹತ್ ಕ್ರೇನ್ಗಳ ಮೂಲಕ ಮರದ ಗೆಲ್ಲುಗಳನ್ನು ತೆರವುಗೊಳಿಸಲಾಯಿತು.