ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ಸೇವಾ ಮಂಡಳಿ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

0

ವಿಟ್ಲ: ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ಸೇವಾ ಮಂಡಳಿ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ 617 ಗಳಿಸಿದ ವಿಟ್ಲ ಸೈಂಟ್ ರೀಟಾ ಪ್ರೌಡ ಶಾಲಾ ವಿದ್ಯಾರ್ಥಿನಿ, ಅಣ್ಣು ಪೂಜಾರಿ ಜೋಗಿಬೆಟ್ಟು – ಜಯಂತಿ ಅವರ ಪುತ್ರಿ ಭ್ರಾಮರಿ ಹಾಗೂ ವಿಟ್ಲ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗದ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ.ಯಲ್ಲಿ 604 ಅಂಕ ಗಳಿಸಿದ ಕೃಷ್ಣಯ್ಯ ಆಚಾರ್ಯ – ಕಮಲ ದಂಪತಿಯ ಪುತ್ರಿ ಶ್ರುತಿ ರವರನ್ನು ಗುರುತಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸೇವಾ ಮಂಡಳಿಯ ಸದಸ್ಯರುಗಳಾದ ಪುನೀತ್ ಮಾಡತ್ತಾರ್ , ಯಶೋಧರ ಪಟ್ಲ , ಶಿವಪ್ರಸಾದ್ ಮಾಡತ್ತಾರ್ , ತುವಿನ್ ಮಾಡತ್ತಾರ್ , ಯೋಗೀಶ್ ಪೂಜಾರಿ , ಅಣ್ಣು ಪೂಜಾರಿ, ಅಶೋಕ್ ಮಾಡತ್ತಾರ್, ಜೀತು ಮಾಡತ್ತಾರ್ , ನಾಗೇಶ್ ಆಚಾರ್ಯ , ಸೀತಾ , ಪ್ರೇಮಾ, ಗಂಗಾ , ಅಕ್ಷತಾ , ಉಷಾ, ವನೀತ , ನಿಮಿತಾ , ಬ್ರಿಜೇಶ್ ಮಾಡತ್ತಾರ್ , ಹೇಮಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here