ಪುತ್ತೂರು : ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಕಜೆ ಎಂಬಲ್ಲಿ ಯುವ ಸಂಘಟಕ ಗಿರಿಶಂಕರ್ ಸುಲಾಯ ದೇವಸ್ಯರವರು ನೂತನವಾಗಿ ನಿರ್ಮಿಸಿರುವ “ಸುಮಗಿರಿ” ಗೃಹಪ್ರವೇಶ ಮೇ 19 ರಂದು ನಡೆಯಲಿದೆ.
ಬೆಳಿಗ್ಗೆ ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಸಂಜೆ ಶ್ರೀ ದುರ್ಗಾಪೂಜೆ ಜರಗಲಿದೆ ಎಂದು ಸುಮಗಿರಿ ನಿಲಯದ ಈಶ್ವರಿ ಟಿ. ಸುಲಾಯ, ಸುಜಯಾ ಗಿರಿಶಂಕರ್, ಗಿರಿಶಂಕರ ಸುಲಾಯ ಹಾಗೂ ಮಾನ್ವಿ ಜಿ.ಎಸ್ ರವರು ತಿಳಿಸಿದ್ದಾರೆ.